ಶುಕ್ರವಾರ, ಸೆಪ್ಟೆಂಬರ್ 20, 2019
27 °C

ತಂಡದ ಆಯ್ಕೆ ಪ್ರಾಮಾಣಿಕವಾಗಿತ್ತು: ಮಾಹೇಲ

Published:
Updated:
Prajavani

ಹೈದರಾಬಾದ್ (ಪಿಟಿಐ): ವಿವಿಧ ಟೂರ್ನಿಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಆಟಗಾರರು ಇದ್ದದ್ದು ಮತ್ತು ಪ್ರಾಮಾಣಿಕವಾಗಿ ತಂಡವನ್ನು ಆಯ್ಕೆ ಮಾಡುತ್ತಿದ್ದದ್ದು ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಕಾರಣ ಎಂದು ಕೋಚ್ ಮಾಹೇಲ ಜಯವರ್ಧನೆ ಅಭಿಪ್ರಾಯಪಟ್ಟರು.

‘ತಂಡದಲ್ಲಿ ಯಶಸ್ಸಿನ ‘ಸಂಸ್ಕೃತಿ’ಯನ್ನು ಬೆಳೆಸಲು ಆಡಳಿತ ತುಂಬ ಶ್ರಮ ವಹಿಸಿದೆ. ತಂಡದಲ್ಲಿ ಎಲ್ಲರೂ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಇದರಿಂದ ಪಂದ್ಯಗಳಲ್ಲಿ ತಂತ್ರಗಳನ್ನು ಹೂಡುವ ಸಂದರ್ಭದಲ್ಲಿ ಎದುರಾಳಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಈ ಅಂಶ ಟೂರ್ನಿಯುದ್ದಕ್ಕೂ ತಂಡಕ್ಕೆ ಸಹಕಾರಿಯಾಗಿದೆ’ ಎಂದು ಅವರು ಹೇಳಿದರು.

Post Comments (+)