ಆಡುವಾಗಲೇ ಕ್ರಿಕೆಟಿಗ ರಾಜೇಶ್ ಸಾವು

7

ಆಡುವಾಗಲೇ ಕ್ರಿಕೆಟಿಗ ರಾಜೇಶ್ ಸಾವು

Published:
Updated:

ಪಣಜಿ: ಗೋವಾ ರಣಜಿ ಕ್ರಿಕೆಟ್ ತಂಡದ  ಆಟಗಾರ ರಾಜೇಶ್ ಘೋಡ್ಗೆ (44) ಅವರು ಮಡಗಾಂವ್‌ನಲ್ಲಿ ಭಾನುವಾರ ಸ್ಥಳೀಯ ಪಂದ್ಯದಲ್ಲಿ ಆಡುವಾಗ ಸಾವನ್ನಪ್ಪಿದರು.

‘ರಾಜೇಂದ್ರಪ್ರಸಾದ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30 ಸುಮಾರಿಗೆ ಈ ಘಟನೆ ನಡೆಯಿತು. ರಾಜೇಶ್ ಅವರು ನಾನ್‌ ಸ್ಟ್ರೈಕರ್‌ ಬ್ಯಾಟ್ಟ್‌ಮನ್‌ ಆಗಿದ್ದರು. ಅವರು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ತಿಳಿಸಿದರು’ ಎಂದು ಟೂರ್ನಿ ಆಯೋಜಿಸಿದ್ದ ಮಡಗಾಂವ್ ಕ್ರಿಕೆಟ್ ಕ್ಲಬ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.

ರಾಜೇಶ್ ಅವರು 1999–2000ರಲ್ಲಿ ಗೋವಾ ರಣಜಿ ತಂಡವನ್ನು ಪ್ರತಿನಿಧಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !