ಮಂಗಳವಾರ, ನವೆಂಬರ್ 12, 2019
25 °C

ಬಾಂಗ್ಲಾ ಆಟಗಾರರಿಗೆ ಸನ್ಮಾನ

Published:
Updated:

ಕೋಲ್ಕತ್ತ: ಬಾಂಗ್ಲಾದೇಶ ತಂಡವು ಚೊಚ್ಚಲ ಟೆಸ್ಟ್‌ ಆಡಿದಾಗ ತಂಡದಲ್ಲಿದ್ದ ಆಟಗಾರರನ್ನು ಸನ್ಮಾನಿಸಲು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತೀರ್ಮಾನಿಸಿದ್ದಾರೆ.

2000ರಲ್ಲಿ ಬಾಂಗ್ಲಾ ತಂಡ ಭಾರತದ ಎದುರು ಮೊದಲ ಟೆಸ್ಟ್‌ ಆಡಿತ್ತು. ಆಗ ಗಂಗೂಲಿ ಮೊದಲ ಬಾರಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದರು.

ನವೆಂಬರ್‌ 22ರಿಂದ 26ರವರೆಗೆ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಭಾರತ–ಬಾಂಗ್ಲಾ ನಡುವಣ ಪಂದ್ಯದ ವೇಳೆ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರಿಗೂ ಆಹ್ವಾನ ನೀಡುವುದಾಗಿ ಗಂಗೂಲಿ ತಿಳಿಸಿದ್ದಾರೆ. ಹಸೀನಾ ಅವರು ಬೆಲ್‌ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ.

ಪ್ರತಿಕ್ರಿಯಿಸಿ (+)