ನವದೆಹಲಿ: ಅನುಭವಿ ಆರಂಭ ಆಟಗಾರ್ತಿ ಸ್ಮೃತಿ ಮಂದಾನಾ ಅವರನ್ನು ಐರ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ತಂಡದ ಪೂರ್ಣಾವಧಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಕೌರ್ ಜೊತೆ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಜನವರಿ 10, 12 ಮತ್ತು 15ರಂದು ಈ ಮೂರು ಪಂದ್ಯಗಳನ್ನು ಆಡಲಾಗುವುದು. ಮೂರೂ ಪಂದ್ಯಗಳು ರಾಜಕೋಟ್ನಲ್ಲೇ ನಡೆಯಲಿವೆ.

ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಸರಣಿಯ ವೇಳೆ ಹರ್ಮನ್ಪ್ರೀತ್ ಕೌರ್ ಮೊಣಕಾಲಿಗೆ ಗಾಯವಾಗಿದ್ದು, ಅವರು ಕೊನೆಯ ಎರಡು ಟಿ20 ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ 35 ವರ್ಷ ವಯಸ್ಸಿನ ಆಟಗಾರ್ತಿ ಮೂರು ಪಂದ್ಯಗಳ ಏಕದಿನ ಸರಣಿ ವೇಳೆ ತಂಡಕ್ಕೆ ಮರಳಿದ್ದರು.

ರೇಣುಕಾ ಸಿಂಗ್, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಗಳ ಸರಣಿಯಲ್ಲಿ 10 ವಿಕೆಟ್ಗಳನ್ನು ಪಡೆದು ಸರಣಿಯ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು. ಕಾರ್ಯದೊತ್ತಡ ನಿರ್ವಹಣೆಯ ಭಾಗವಾಗಿ ವಿಶ್ರಾಂತಿ ನೀಡಲಾಗಿದೆ.

ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕಳೆದ ತಿಂಗಳು 2–1 ರಿಂದ ಗೆಲ್ಲುವ ಮೂಲಕ ಐದು ವರ್ಷಗಳಲ್ಲೇ ಮೊದಲ ಬಾರಿಗೆ ಭಾರತ ತಂಡ ತವರಿನಲ್ಲಿ ಟಿ20 ಸರಣಿ ವಶಕ್ಕೆ ಪಡೆದ ಹುರುಪಿನಲ್ಲಿದೆ. ನಂತರ ಅದೇ ತಂಡದ ವಿರುದ್ಧ ಏಕದಿನ ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತ್ತು.

28 ವರ್ಷದ ಮಂದಾನ ಅಮೋಘ ಲಯದಲ್ಲಿದ್ದು, ಟಿ20 ಸರಣಿಯಲ್ಲಿ ಸತತ ಮೂರು ಅರ್ಧ ಶತಕಗಳನ್ನು ಗಳಿಸಿದ್ದರು. ಏಕದಿನ ಸರಣಿಯಲ್ಲೂ ಎರಡು ಅರ್ಧ ಶತಕ ಬಾರಿಸಿ ಗಮನಸೆಳೆದಿದ್ದರು.

ಭಾರತ ತಂಡ: ಸ್ಮೃತಿ ಮಂದಾನ (ನಾಯಕಿ), ದೀಪ್ತಿ ಶರ್ಮಾ (ಉಪ ನಾಯಕಿ), ಪ್ರತಿಕಾ ರಾವಲ್, ಹರ್ಲೀನ್ ಡಿಯೊಲ್, ಜೆಮಿಮಾ ರೋಡ್ರಿಗಸ್, ಉಮಾ ಚೆಟ್ರಿ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ರಾಘವಿ ಬಿಷ್ಟ್, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ತಿತಾಸ್ ಸಾಧು, ಸೈಮಾ ಠಾಕೂರ್ ಮತ್ತು ಸಯಾಲಿ ಸಾತ್ಗರೆ.

ಎಲ್ಲ ಪಂದ್ಯಗಳು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.