ಲೀಡ್ಸ್: ಯಾವುದೇ ಕ್ರೀಡೆಯಲ್ಲಿ ಪರಿವರ್ತನೆಯ ಘಟ್ಟವು ಅನಿವಾರ್ಯ ಅಂಗವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ತಂಡ ಕ್ರೀಡೆಗಳಲ್ಲಿ ಸೂಪರ್ಸ್ಟಾರ್ ಆಟಗಾರರ ನಿವೃತ್ತಿಯು ದೊಡ್ಡ ನಿರ್ವಾತವನ್ನು ಸೃಷ್ಟಿಸುತ್ತದೆ. ಇನ್ನೊಂದೆಡೆ ಇದು ಹೊಸಪೀಳಿಗೆಯ ಆಟಗಾರರಿಗೆ ತಮ್ಮ ಪ್ರತಿಭೆ ಮತ್ತು ತಂಡವನ್ನು ಔನತ್ಯಕ್ಕೆ ಕೊಂಡೊಯ್ಯುವ ಅವಕಾಶವನ್ನೂ ಸೃಷ್ಟಿಸುತ್ತದೆ.

ಈ ವರ್ಷದ ಆರಂಭದಲ್ಲಿ ಭಾರತ ತಂಡದ ಇಬ್ಬರು ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರ ಹಠಾತ್ ನಿವೃತ್ತಿಯು ಭಾರತವನ್ನು ಬಾಧಿಸಿದೆ. ಶುಕ್ರವಾರ ಹೆಡಿಂಗ್ಲಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆ ತಾರಾವರ್ಚಸ್ಸಿನ ಆಟಗಾರರ ಗೈರು ಎದ್ದುಕಾಣಬಹುದು.

‘ಈ ಪ್ರವಾಸವನ್ನು ನೋಡಲು ಎರಡು ಮಾರ್ಗಗಳಿವೆ. ಒಂದು ನಾವು ನಮ್ಮ ಮೂವರು ಅತ್ಯಂತ ಅನುಭವಿ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದ್ದೇವೆ. ಇನ್ನೊಂದು; ದೇಶಕ್ಕಾಗಿ ವಿಶೇಷವಾದ ಏನನ್ನಾದರೂ ಮಾಡಲು ನಮಗೆ ಈ ಅದ್ಭುತ ಅವಕಾಶ ಸಿಕ್ಕಿರುವ ಅವಕಾಶ ಇದಾಗಿದೆ’ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಒಂದು ವಾರದ ಹಿಂದೆ ಬಿಸಿಸಿಐ ಡಾಟ್ ಟಿವಿಯೊಂದಿಗಿನ ಸಂವಾದದಲ್ಲಿ ಹೇಳಿದ್ದರು.

ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಪ್ರವಾಸಗಳು ಭಾರತ ತಂಡಕ್ಕೆ ಯಾವಾಗಲೂ ಕಠಿಣ ಸವಾಲಿನದ್ದಾಗಿವೆ. ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಆಡಿರುವ 19 ಸರಣಿಗಳ ಪೈಕಿ ಮೂರರಲ್ಲಿ ಗೆದ್ದಿದ್ದಾರೆ, ಕೊನೆಯ ಗೆಲುವು 2007ರಲ್ಲಿ ಬಂದಿತು. ಬೆಳಗಿನ ಅವಧಿಯಲ್ಲಿ ಬಿಸಿಲು ಮತ್ತು ಸಂಜೆಯ ಹೊತ್ತಿಗೆ ಶೀತಗಾಳಿಯಂತಹ ಪರಿಸ್ಥಿತಿ ಇಲ್ಲಿರುತ್ತವೆ. ಇಲ್ಲಿಯ ಪಿಚ್ಗಳಲ್ಲಿ ಚೆಂಡು ಸ್ವಿಂಗ್, ಸೀಮ್ ಆಗುವ ರೀತಿ ಕೂಡ ಕೆಲವೊಮ್ಮೆ ಊಹೆಗೂ ನಿಲುಕದು. ಇನ್ನೊಂದೆಡೆ ಪ್ರೇಕ್ಷಕರ ಗ್ಯಾಲರಿಗಳಲ್ಲಿರುವ ಸ್ಥಳೀಯ ಜನಸಮೂಹಗಳು ಪ್ರವಾಸಿ ತಂಡಕ್ಕೆ ಸವಾಲೊಡ್ಡಬಲ್ಲವು.

ಎರಡು ವರ್ಷಗಳ ಅವಧಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ– ನಾಲ್ಕನೇ ಆವೃತ್ತಿ) ನಲ್ಲಿ ಇದು ಮೊದಲ ಸರಣಿಯಾಗಿದೆ. ಇದರ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಒಂದಿಷ್ಟು ಪ್ರಶ್ನೆಗಳು ಕಾಡುತ್ತಿರುವುದೂ ಸುಳ್ಳಲ್ಲ. ಯುವ ಆಟಗಾರರು ಹೆಚ್ಚು ಸಂಖ್ಯೆಯಲ್ಲಿರುವ, ಕೆಲವೇ ಅನುಭವಿಗಳೂ ಇರುವ ತಂಡವು ಹೇಗೆ ಕಾರ್ಯನಿರ್ವಹಿಸಬಹುದು? 25ನೇ ವಯಸ್ಸಿನಲ್ಲಿಯೇ ನಾಯಕತ್ವದ ಕಠಿಣ ಸ್ಥಾನಕ್ಕೆ ನೇಮಕವಾಗಿರುವ ಶುಭಮನ್ ಗಿಲ್ ಆಯ್ಕೆಗಾರರ ವಿಶ್ವಾಸ ಉಳಿಸಿಕೊಳ್ಳಬಲ್ಲರೇ? ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ತಕ್ಕ ಉತ್ತರ ನೀಡುವಲ್ಲಿ ಬೌಲರ್ಗಳು ಯಶಸ್ವಿಯಾಗುವರೇ? ಕಳೆದ 8 ಟೆಸ್ಟ್ಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದಿರುವ ಹಾಗೂ ಸತತ ಎರಡು ಸರಣಿ ಸೋಲುಗಳ ಹಿನ್ನೆಲೆಯಲ್ಲಿ ಭಾರತವು ಯಶಸ್ಸಿನ ಹಾದಿಗೆ ಮರಳುವುದೇ?

ಈ ಎಲ್ಲ ಅನುಮಾನಗಳಿಗೂ ಶುಕ್ರವಾರದಿಂದ ಉತ್ತರಗಳು ಸಿಗಲಾರಂಭಿಸುತ್ತವೆ. ಆದರೆ ಭಾರತ ತಂಡದಲ್ಲಿ ಮಾತ್ರ ಶಾಂತ ಹಾಗೂ ಆತ್ಮವಿಶ್ವಾಸದ ಗಾಳಿ ಬೀಸುತ್ತಿದೆ. ಬ್ಯಾಟಿಂಗ್ ಕ್ರಮಾಂಕ ಯುವ ಮತ್ತು ಅನುಭವದ ಉತ್ತಮ ಮಿಶ್ರಣವನ್ನು ಹೊಂದಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಈಗ ಕೇವಲ 23 ವರ್ಷ ವಯಸ್ಸಾಗಿದೆ. ಆದರೆ ಮುಂಬೈಕರ್ ಈಗಾಗಲೇ 19 ಟೆಸ್ಟ್ಗಳನ್ನು ಆಡಿರುವ ಅನುಭವಿ. ಈ ಪ್ರಯಾಣದಲ್ಲಿ ಅವರು ಈಗಾಗಲೇ 52.88 ಸರಾಸರಿಯಲ್ಲಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್ಗಳಲ್ಲಿ 391 ರನ್ ಗಳಿಸಿದ್ದರು. ಅವರು ನಿಜವಾಗಿಯೂ ವಿಶ್ವದ ಪ್ರತಿಯೊಂದು ಭಾಗದಲ್ಲೂ ಉತ್ತಮ ಸಾಧನೆ ಮಾಡುವ ಹಸಿವು ಹೊಂದಿದ್ದಾರೆ ಎಂಬುದಂತೂ ನಿಜ. ಅನುಭವಿಗಳಾದ ಕೆಎಲ್ ರಾಹುಲ್, ಗಿಲ್ ಮತ್ತು ರಿಷಭ್ ಪಂತ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಇರುವುದು ಈ ಮೂವರು ಆಟಗಾರರಿಗೆ ಮಾತ್ರ. ಆದ್ದರಿಂದ ಅವರ ಹೊಣೆಗಾರಿಕಯೇ ಹೆಚ್ಚು.

ಈ ಸರಣಿಯು ಗಿಲ್ ಅವರ ಪಾತ್ರದ ದೊಡ್ಡ ಪರೀಕ್ಷೆಯೂ ಆಗಿದೆ. ತನ್ನ ಹದಿಹರೆಯದ ವಯಸ್ಸಿನಿಂದ ಕೊಹ್ಲಿಯ ಸಿಂಹಾಸನದ ಉತ್ತರಾಧಿಕಾರಿಯೆಂದು ಪರಿಗಣಿಸಲ್ಪಟ್ಟ ‘ಯುವರಾಜ’ನನ್ನು ಈಗ ರಾಜನಾಗಿ ನೇಮಿಸಲಾಗಿದೆ. ಬ್ಯಾಟರ್ ಮತ್ತು ನಾಯಕನಾಗಿ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಭಾರತೀಯ ಕ್ರಿಕಿಟ್್ ಭವಿಷ್ದದ ದಿಕ್ಸೂಚಿಯಾಗಲಿದೆ.

ತಂಡದಲ್ಲಿರುವ ಶ್ರೇಷ್ಠ ಬೌಲರ್ಗಳಿಂದಾಗಿ ಗಿಲ್ ಆತ್ಮವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್ ತಂಡದಲ್ಲಿ ಅನುಭವಿ ಬೌಲರ್ಗಳು ಇಲ್ಲ. ಅದಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ಭಾರತವೇ ಉತ್ತಮವಾಗಿದೆ. ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬೂಮ್ರಾ, ಅವರಿಗೆ ಜೊತೆ ನೀಡಲಿರುವ ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ಧಕೃಷ್ಣ ತಂಡಕ್ಕೆ ಉತ್ತಮ ಆರಂಭ ನೀಡುವ ಛಲದಲ್ಲಿದ್ದಾರೆ. ಸ್ಪಿನ್ನರ್ಗಳಾದ ಅನುಭವಿ ರವೀಂದ್ರ ಜಡೇಜ ಮತ್ತು ಪ್ರಭಾವಿ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತಮ ಲಯದಲ್ಲಿದ್ದಾರೆ.

ಆತಿಥೇಯ ತಂಡವು ಯಥಾಪ್ರಕಾರ ತಮ್ಮ ‘ಬೇಜ್ಬಾಲ್’ ಆಟವನ್ನೇ ಮುಂದುವರಿಸುವುದಾಗಿ ಈಗಾಗಲೇ ಘೋಷಿಸಿಕೊಂಡಿದೆ. 2024ರಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಈ ತಂತ್ರಗಾರಿಕೆ ವಿಫಲವಾಗಿತ್ತು. 1–4ರಿಂದ ಸರಣಿಯಲ್ಲಿ ಸೋತಿತ್ತು. ಆದರೀಗ ತನ್ನ ತವರಿನ ಅಂಗಳದಲ್ಲಿ ಬೇಜ್ಬಾಲ್ ಯಶಸ್ವಿಯಾಗುವ ವಿಶ್ವಾಸ ಬೆನ್ ಸ್ಟೋಕ್ಸ್ ಬಳಗಕ್ಕೆ ಇದೆ. ಉಭಯ ತಂಡಗಳ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಸರಣಿಗೆ ರೋಚಕ ಆರಂಭ ಸಿಗುವುದರಲ್ಲಿ ಅನುಮಾನವೇ ಇಲ್ಲ.

ತಂಡಗಳು ಭಾರತ: ಶುಭಮನ್ ಗಿಲ್ (ನಾಯಕ) ರಿಷಭ್ ಪಂತ್ (ಉಪನಾಯಕ/ವಿಕೆಟ್ಕೀಪರ್) ಅಭಿಮನ್ಯು ಈಶ್ವರನ್ ಯಶಸ್ವಿ ಜೈಸ್ವಾಲ್ ಧ್ರುವ ಜುರೇಲ್ ಕರುಣ್ ನಾಯರ್ ಕೆ.ಎಲ್. ರಾಹುಲ್ ಸಾಯಿ ಸುದರ್ಶನ್ ರವೀಂದ್ರ ಜಡೇಜ ನಿತೀಶ್ ಕುಮಾರ್ ರೆಡ್ಡಿ ವಾಷಿಂಗ್ಟನ್ ಸುಂದರ್ ಆಕಾಶದೀಪ್ ಅರ್ಷದೀಪ್ ಸಿಂಗ್ ಜಸ್ಪ್ರೀತ್ ಬೂಮ್ರಾ ಹರ್ಷಿತ್ ರಾಣಾ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಪ್ರಸಿದ್ಧಕೃಷ್ಣ ಶಾರ್ದೂಲ್ ಠಾಕೂರ್. ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ) ಜೆಮಿ ಸ್ಮಿತ್ (ವಿಕೆಟ್ಕೀಪರ್) ಕ್ರಿಸ್ ವೋಕ್ಸ್ ಬ್ರೈಡಮನ್ ಕೇರ್ಸ್ ಜೋಶ್ ಟಂಗ್ ಶೋಯಬ್ ಬಶೀರ್ ಜ್ಯಾಕ್ ಕ್ರಾಲಿ ಬೆನ್ ಡಕೆಟ್ ಒಲಿ ಪೋಪ್ ಜೋ ರೂಟ್ ಹ್ಯಾರಿ ಬ್ರೂಕ್. ಪಂದ್ಯ ಆರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.