ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Sri Lankan Legends League: ಭಾರತ ಮೂಲದ ಮಾಲೀಕರ ಮೇಲೆ ಫಿಕ್ಸಿಂಗ್ ಆರೋಪ

Published 23 ಏಪ್ರಿಲ್ 2024, 13:25 IST
Last Updated 23 ಏಪ್ರಿಲ್ 2024, 13:25 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಲೆಜೆಂಡ್ಸ್‌ ಕ್ರಿಕೆಟ್ ಲೀಗ್‌ನಲ್ಲಿ ಆಡುವ ತಂಡವೊಂದರ ಭಾರತೀಯ ಮೂಲದ ಮಾಲೀಕರು ಪಂದ್ಯ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ.

ಕ್ಯಾಂಡಿ ಸ್ವಾಂಪ್ ಆರ್ಮಿ ತಂಡದ ಮಾಲೀಕರಾದ ಯೊನಿ ಪಟೇಲ್ ಹಾಗೂ ಅವರ ಸಹವರ್ತಿ ಪಿ. ಆಕಾಶ್ ಅವರು ಆರೋಪದಲ್ಲಿ ಸಿಕ್ಕಿಕೊಂಡಿದ್ದಾರೆ. ಹೋದ ಶುಕ್ರವಾರ ಅವರು ಸಲ್ಲಿಸಿದ್ದ ಬೇಲ್ ಅರ್ಜಿಯನ್ನು ಕೊಲಂಬೊ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತಳ್ಳಿ ಹಾಕಿದೆ. ಅವರಿಬ್ಬರಿಗೆ ಒಂದು ತಿಂಗಳವರೆಗೆ ಪ್ರಯಾಣ ನಿಷೇಧವನ್ನೂ ವಿಧಿಸಲಾಗಿದೆ.

ಮಾರ್ಚ್ 8ರಿಂದ 19ರವರೆಗೆ ಸೆಂಟ್ರಲ್ ಕ್ಯಾಂಡಿ ಜಿಲ್ಲೆಯ ಪಲೆಕೆಲೆ ಕ್ರೀಡಾಂಗಣದಲ್ಲಿ ಲೆಜೆಂಡ್ಸ್ ಟೂರ್ನಿ ನಡೆದಿತ್ತು. ಫೈನಲ್‌ನಲ್ಲಿ ರಾಜಸ್ಥಾನ್ ಕಿಂಗ್ಸ್‌ ತಂಡವು ನ್ಯೂಯಾರ್ಕ್ ಸೂಪರ್ ಸ್ಟ್ರೈಕರ್ಸ್‌ ವಿರುದ್ಧ ಫೈನಲ್‌ನಲ್ಲಿ ಜಯಿಸಿತ್ತು. ಈ ಟೂರ್ನಿಯ ಕೆಲವು ಪಂದ್ಯಗಳನ್ನು ಫಿಕ್ಸ್ ಮಾಡಲು ಪಟೇಲ್ ಮತ್ತು ಆಕಾಶ್ ಪ್ರಯತ್ನಿಸಿದ್ದರು ಎಂಬ ಪ್ರಕರಣಗಳನ್ನು ದಾಖಲಿಸಲಾಗಿದೆ.

‘ಆಕಾಶ್ ಅವರು ಪಂಜಾಬ್ ರಾಯಲ್ಸ್ ತಂಡದ ಮ್ಯಾನೇಜರ್ ಆಗಿದ್ದು ಅವರ ಮೇಲೆಯೂ ಆರೋಪಗಳಿವೆ’ ಎಂದು ಮೂಲಗಳು ತಿಳಿಸಿವೆ. 

ಶ್ರೀಲಂಕಾ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಉಪುಲ್ ತರಂಗಾ ಹಾಗೂ ನ್ಯೂಜಿಲೆಂಡ್‌ ಮಾಜಿ ಆಟಗಾರ ನೀಲ್ ಬ್ರೂಮ್ ಅವರು ದೂರು ದಾಖಲಿಸಿದ್ದಾರೆ.  

ಲೆಜೆಂಡ್ಸ್ ಟೂರ್ನಿಗೆ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಹಾಗೂ ಶ್ರೀಲಂಕಾ ಕ್ರಿಕೆಟ್ ಸಂಸ್ಥೆಗಳು ಮಾನ್ಯತೆ ನೀಡಿಲ್ಲ.

2019ರಲ್ಲಿ ಪಂದ್ಯ ಫಿಕ್ಸಿಂಗ್ ಪಿಡುಗು ತಡೆಗೆ ಶ್ರೀಲಂಕಾದಲ್ಲಿ ಕಾನೂನು ಮಾಡಲಾಗಿದೆ. ದಕ್ಷಿಣ ಏಷ್ಯಾ ದೇಶದಲ್ಲಿ ಈ ರೀತಿ ನಿಯಮ ತಂಡದ ಮೊದಲ ದೇಶವೂ ಇದಾಗಿದೆ. ತಪ್ಪು ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ. ಅಲ್ಲದೇ ದಂಡ ಕೂಡ ವಿಧಿಸಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT