ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

6–12 ಗಂಟೆಗಳಲ್ಲಿ ವಿಮಾನ ನಿಲ್ದಾಣ ತೆರೆಯುವ ಸಾಧ್ಯತೆ: ಬಾರ್ಬಡೋಸ್ ಪ್ರಧಾನಿ

Published 2 ಜುಲೈ 2024, 3:31 IST
Last Updated 2 ಜುಲೈ 2024, 3:31 IST
ಅಕ್ಷರ ಗಾತ್ರ

ಬ್ರಿಜ್‌ಟೌನ್(ಬಾರ್ಬಡೋಸ್): ಟಿ–20 ವಿಶ್ವಕಪ್ ವಿಜೇತ ಭಾರತ ತಂಡ ಇಂದು ಸಂಜೆ ಬಾರ್ಬಡೋಸ್‌ನಿಂದ ಭಾರತಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ಕೆಟಗರಿ 4ರ ಭಾರಿ ಚಂಡಮಾರುತದ ಹಿನ್ನೆಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಮುಚ್ಚಲಾಗಿರುವ ವಿಮಾನ ನಿಲ್ದಾಣ 6 ರಿಂದ 12 ಗಂಟೆಗಳಲ್ಲಿ ತೆರೆಯುವ ಸಾಧ್ಯತೆ ಇದೆ ಎಂದು ಬಾರ್ಬಡೋಸ್ ಪ್ರಧಾನಿ ಮಿಯಾ ಮೋಟ್ಲಿ ಹೇಳಿದ್ದಾರೆ.

ಚಂಡಮಾರುತ ಬೆರಿಲ್ ಅಬ್ಬರದಿಂದಾಗಿ ರೋಹಿತ್ ಶರ್ಮಾ ನೇತೃತ್ವದ ಟಿ–20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರ ಕುಟುಂಬ ಸದಸ್ಯರು ಬಾರ್ಬಡೋಸ್‌ನಲ್ಲೇ ಎರಡು ದಿನಗಳಿಂದ ಸಿಲುಕಿಕೊಂಡಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಮಣಿಸಿ ಭಾರತ ತಂಡ ಟ್ರೋಫಿ ಎತ್ತಿಹಿಡಿದಿತ್ತು.

‘ನಾವು ವಿಮಾನ ನಿಲ್ದಾಣ ತೆರೆಯುವ ಬಗ್ಗೆ ಕಾರ್ಯೋನ್ಮುಖರಾಗಿದ್ದೇವೆ. ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಸಂಪರ್ಕದಲಿದ್ದೇವೆ. ಕೊನೆಯ ಹಂತದ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ತುರ್ತು ಇರುವ ಕಾರಣ ನಾವು ಆದಷ್ಟು ಬೇಗ ವಿಮಾನಗಳ ಕಾರ್ಯಾಚರಣೆ ಆರಂಭಿಸಲಿದ್ದೇವೆ’ ಎಂದು ಮೋಟ್ಲಿ ಹೇಳಿದ್ದಾರೆ.

‘ಹಲವು ಮಂದಿ ತಮ್ಮ ದೇಶಗಳಿಗೆ ತೆರಳಲು ಕಾಯುತ್ತಿದ್ದಾರೆ. 6 ರಿಂದ 12 ಗಂಟೆ ಒಳಗೆ ನಿಲ್ದಾಣ ತೆರೆಯಬಹುದು ಎಂದು ನಾನು ಹೇಳಬಲ್ಲೆ’ ಎಂದು ಪ್ರಧಾನಿ ಹೇಳಿದ್ದಾರೆ.

ಮಾರಣಾಂತಿಕ ಮಾರುತಗಳು ಸೋಮವಾರವೂ ಬಾರ್ಬಡೋ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT