ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ರುದ್ರಸಿಂಗ್ ಆಲ್‌ರೌಂಡ್ ಆಟ

Last Updated 29 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ರುದ್ರ ಸಿಂಗ್‌ (103 ರನ್‌, 28ಕ್ಕೆ 3 ವಿಕೆಟ್‌) ಅವರ ಆಲ್‌ರೌಂಡ್ ಆಟದ ಬಲದಿಂದ ಸೆಂಚುರಿ ಕ್ರಿಕೆಟರ್ಸ್ ತಂಡದವರು ಕೆಎಸ್‌ಸಿಎ ಗುಂಪು 1ರಿಂದ ಮೂರನೇ ಡಿವಿಷನ್‌ 16 ವರ್ಷದೊಳಗಿನವರ ಅಂತರಕ್ಲಬ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿದರು.

ಇಲ್ಲಿ ನಡೆದ ಪಂದ್ಯದಲ್ಲಿ ಜೈದೂರ್‌ ಕ್ರಿಕೆಟರ್ಸ್‌ ಎದುರು 182 ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಸೆಂಚುರಿ ಕ್ರಿಕೆಟರ್ಸ್ 49.3 ಓವರ್‌ಗಳಲ್ಲಿ 312 ರನ್ ಗಳಿಸಿತು. ಗುರಿ ಬೆನ್ನತ್ತಿದ ಜೈದೂರ್‌ 29.4 ಓವರ್‌ಗಳಲ್ಲಿ 130 ರನ್‌ ಗಳಿಸಿ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್: ಸೆಂಚುರಿ ಕ್ರಿಕೆಟರ್ಸ್: 49.3 ಓವರ್‌ಗಳಲ್ಲಿ 312 (ಇಶಾನ್‌ ಯತಿರಾಜ್‌ 31, ರುದ್ರ ಸಿಂಗ್‌ 103, ಪ್ರಜ್ವಲ್ ಜಿ. 78, ಆದಿತ್ಯ ಎಂ.33, ಮೊಹಮ್ಮದ್ ಅಕೀಬ್‌ 43ಕ್ಕೆ 2; ಅಕರ್ಷ್‌ ಮಯ್ಯ 57ಕ್ಕೆ 3). ಜೈದೂರ್ ಕ್ರಿಕೆಟರ್ಸ್: 29.4 ಓವರ್‌ಗಳಲ್ಲಿ 130 (ಆಕರ್ಷ್ ಮಯ್ಯ 46, ರುದ್ರ ಸಿಂಗ್‌ 28ಕ್ಕೆ 3, ಕುಶ್ ಜೈನ್‌ 71ಕ್ಕೆ 5, ನೇಸರ ಪಿ. ಅಥಣಿ 18ಕ್ಕೆ 2). ಫಲಿತಾಂಶ: ಸೆಂಚುರಿ ಕ್ರಿಕೆಟರ್ಸ್‌ಗೆ 182 ರನ್‌ಗಳ ಜಯ

ಜುಪಿಟರ್‌ ಕ್ರಿಕೆಟರ್ಸ್: 49.2 ಓವರ್‌ಗಳಲ್ಲಿ 159 (ಮೋಹಿತ್ ಪ್ರಕಾಶ್‌ 31, ಮೋನಿಶ್ ಜಿ. 23; ನಿತಿನ್ ರೆಡ್ಡಿ 24ಕ್ಕೆ 3, ಸಾಕೇತ್ ಕೆ.ಎ. 33ಕ್ಕೆ 2). ಫ್ರೆಂಡ್ಸ್ ಯೂನಿಯನ್‌ ಸಿಸಿ (2): 38.1 ಓವರ್‌ಗಳಲ್ಲಿ 3ಕ್ಕೆ 160 (ಶೌರ್ಯ ಮನೀಷ್‌ ಔಟಾಗದೆ 51, ಅಂಶ್‌ ಸಿಂಗ್ 37; ಮೋನಿಶ್‌ ಜಿ. 14ಕ್ಕೆ 2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್‌ಗೆ ಏಳು ವಿಕೆಟ್‌ಗಳ ಜಯ.

ಕ್ಯಾವಿಲಿಯರ್ಸ್ ಸಿಸಿ: 43.5 ಓವರ್‌ಗಳಲ್ಲಿ 166 (ತರುಣ್ ಕುಮಾರ್ ಕೆ.ಎಲ್‌ 38, ರಚಿತ್ ಮಧುಸೂದನ್‌ 21; ಖುಷ್ ಕೊಠಾರಿ 35ಕ್ಕೆ 2, ಭವಿಷ್ ಶರ್ಮಾ 24ಕ್ಕೆ4, ಗೋವಿಂದ್‌ ಬಾಲಾಜಿ ಎಸ್‌. 25ಕ್ಕೆ 2). ವಿಲ್ಸನ್‌ ಗಾರ್ಡನ್ ಸಿಸಿ: 27 ಓವರ್‌ಗಳಲ್ಲಿ 2ಕ್ಕೆ 165 (ಚಂದ್ರೋನೀಲ್ ನಂದಿ ಔಟಾಗದೆ 74, ಮೊಹಮ್ಮದ್ ಫಹಾದ್ ಅಲಿ 47; ಲಿಖಿತ್ ದಾಸ್‌ 19ಕ್ಕೆ 2). ಫಲಿತಾಂಶ: ವಿಲ್ಸನ್‌ ಗಾರ್ಡನ್‌ ಸಿಸಿಗೆ ಎಂಟು ವಿಕೆಟ್‌ಗಳ ಜಯ.

ಬೆಂಗಳೂರು ಆಕೇಷನಲ್ಸ್: 50 ಓವರ್‌ಗಳಲ್ಲಿ 3 ವಿಕೆಟ್‌ಗೆ 371 (ಮಾನಸ್‌ ಎ. ಬಾಲಾಜಿ 81, ವಜ್ರ ಎಸ್‌. 38, ಆಶಿತ್‌ ಶಿವಣ್ಣ ಔಟಾಗದೆ 123, ಸಿದ್ಧಾರ್ಥ್ ಎ. ಔಟಾಗದೆ 103). ಹನುಮಂತನಗರ ಸಿಸಿ: 38.2 ಓವರ್‌ಗಳಲ್ಲಿ 135 (ಕಿಶನ್ ಜೆ. 24, ರಜಾ ಮಹಮೂದ್‌ 40; ದಿವಿತ್ ವಿಶ್ವನಾಥ್‌ 28ಕ್ಕೆ 2, ಆಯಾನ್‌ ಶರ್ಮೊದ್ ಕುಮಾರ್ 21ಕ್ಕೆ 3, ಆದರ್ಶ್ ದಾಸ್‌ 32ಕ್ಕೆ 2). ಫಲಿತಾಂಶ:ಬೆಂಗಳೂರು ಆಕೇಷನಲ್ಸ್ ತಂಡಕ್ಕೆ 236 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT