ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: MI vs GT- ಜಸ್‌ಪ್ರೀತ್ ಬೂಮ್ರಾ ಬೌಲಿಂಗ್ ಭರಾಟೆ

ಹೋರಾಟದ ಮೊತ್ತ ಗಳಿಸಿದ ಗುಜರಾತ್ ಟೈಟನ್ಸ್: ಸಾಯಿ ಸುದರ್ಶನ್ ಉತ್ತಮ ಆಟ
Published 24 ಮಾರ್ಚ್ 2024, 16:23 IST
Last Updated 24 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಅಹಮದಾಬಾದ್: ಮುಂಬೈ ಇಂಡಿಯನ್ಸ್ ತಂಡದ ಜಸ್‌ಪ್ರೀತ್ ಬೂಮ್ರಾ ಅವರ ಯಾರ್ಕರ್ ಮತ್ತು ಸ್ವಿಂಗ್‌ಗಳ ಭರಾಟೆಯ ಮುಂದೆ ಗುಜರಾತ್ ಟೈಟನ್ಸ್ ತಂಡದ ಬೃಹತ್ ಮೊತ್ತ ಗಳಿಸುವ ಗುರಿ ಕೈಗೂಡಲಿಲ್ಲ. 

ಭಾನುವಾರ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ನಯಕ ಶುಭಮನ್ ಗಿಲ್ (31; 22ಎ, 4X3, 6X1) ಹಾಗೂ ಸಾಯಿ ಸುದರ್ಶನ್ (45; 39ಎ, 4X3, 6X1) ಅವರಿಬ್ಬರ ಆಟದ ಬಲದಿಂದ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 168 ರನ್ ಗಳಿಸಿತು. 

ಬೂಮ್ರಾ (14ಕ್ಕೆ3) ಅವರು ಈ ಬಾರಿಯ ಐಪಿಎಲ್‌ನಲ್ಲಿ  ವಿಕೆಟ್ ಖಾತೆಯನ್ನು  ತಮ್ಮ ‘ಟ್ರೇಡ್‌ಮಾರ್ಕ್’ ಎಸೆತ ಯಾರ್ಕರ್ ಮೂಲಕವೇ ಆರಂಭಿಸಿದರು. ಗಂಟೆಗೆ 140 ಕಿ.ಮೀ ವೇಗದ ಅವರ ಯಾರ್ಕರ್‌ ಎಸೆತವನ್ಡು ಎದುರಿಸಲು ನಬಡಾಯಿಸಿದ ವೃದ್ಧಿಮಾನ್ ಸಹಾ ವಿಕೆಟ್ ಒಪ್ಪಿಸಿದರು. ಮಿಡ್ಲ್‌ ಸ್ಟಂಪ್ ಎಗರಿಬಿತ್ತು. ಇದಾಗಿ ಮೂರು ಓವರ್‌ಗಳ ನಂತರ ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಕಿದ ಗೂಗ್ಲಿಯನ್ನು ಲಾಂಗ್‌ ಆನ್‌ಗೆ ಹೊಡೆದ ನಾಯಕ ಗಿಲ್ ಅವರನ್ನು ರೋಹಿತ್ ಶರ್ಮಾ ಕ್ಯಾಚ್ ಮಾಡಿದರು. 

ನಂತರ ಅಫ್ಗನ್ ಬ್ಯಾಟರ್ ಅಜ್ಮತ್‌ವುಲ್ಲಾ ಒಮರ್‌ಝೈ ಅವರಿಗೆ ಗೆರಾಲ್ಡ್ ಕೋಯಿಜಿ ಡಗ್‌ಔಟ್ ದಾರಿ ತೋರಿಸಿದರು. ಸ್ಪೋಟಕ ಶೈಲಿಯ ಬ್ಯಾಟರ್ ಡೇವಿಡ್ ಮಿಲ್ಲರ್ (11 ಎಸೆತಗಳಲ್ಲಿ 12) ಅವರು ಬೂಮ್ರಾ ಹಾಕಿದ ನಿಧಾನಗತಿಯ ಎಸೆತವನ್ನು ಮಿಡ್‌ ಆನ್ ದಾಟಿಸುವ ಯತ್ನದಲ್ಲಿ ವಿಫಲರಾದರು. ಅಲ್ಲಿ ಫೀಲ್ಡಿಂಗ್‌ನಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕಠಿಣವಾಗಿದ್ದ ಕ್ಯಾಚ್ ಪಡೆದು ಸಂಭ್ರಮಿಸಿದರು. ಅದೇ ಓವರ್‌ನಲ್ಲಿ ಸಾಯಿ ಸುದರ್ಶನ್ ವಿಕೆಟ್ ಗಳಿಸಿದ ಬೂಮ್ರಾ ಸಂಭ್ರಮಿಸಿದರು. ಇವರಿಬ್ಬರೂ ಔಟಾಗಿದ್ದರಿಂದ  ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ಗಳಿಕೆಯ ವೇಗ ಕುಸಿಯಿತು.  

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 168 (ಶುಭಮನ್ ಗಿಲ್ 31, ಸಾಯಿ ಸುದರ್ಶನ್ 45, ಅಜ್ಮತ್‌ವುಲ್ಲಾ ಒಮರ್‌ಝೈ 17, ರಾಹುಲ್ ತೆವಾಟಿಯಾ 22, ಜಸ್‌ಪ್ರೀತ್ ಬೂಮ್ರಾ 14ಕ್ಕೆ3, ಗೆರಾಲ್ಡ್ ಕೊಯಿಜಿ 27ಕ್ಕೆ2) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT