ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್ | ಟ್ರಾವಿಸ್ ಹೆಡ್‌ಗೆ ₹ 2 ಕೋಟಿ, ರಚಿನ್ ರವೀಂದ್ರಗೆ ₹ 50 ಲಕ್ಷ ಮೂಲಬೆಲೆ

Published 2 ಡಿಸೆಂಬರ್ 2023, 1:30 IST
Last Updated 2 ಡಿಸೆಂಬರ್ 2023, 1:30 IST
ಅಕ್ಷರ ಗಾತ್ರ

ನವದೆಹಲಿ: ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಹೀರೊ ಟ್ರಾವಿಸ್ ಹೆಡ್  ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ತಲಾ ₹2 ಕೋಟಿ ನಿಗದಿಪಡಿಸಲಾಗಿದೆ. ಭಾರತದ ಬೌಲರ್ ಹರ್ಷಲ್ ಪಟೇಲ್ ಅವರಿಗೂ ಇದೇ ಮೌಲ್ಯ ಇಡಲಾಗಿದೆ.

ದುಬೈನಲ್ಲಿ ಇದೇ 19ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ನ್ಯೂಜಿಲೆಂಡ್ ತಂಡದಲ್ಲಿ ಆಡುವ ಬೆಂಗಳೂರು ಮೂಲದ ಆಲ್‌ರೌಂಡರ್ ರಚಿನ್ ರವೀಂದ್ರ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಯಾಗಿದೆ. 

1166 ಆಟಗಾರರು ಬಿಡ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ  ಪಟ್ಟಿಯನ್ನು ಫ್ರ್ಯಾಂಚೈಸಿಗಳಿಗೆ ಕಳುಹಿಸಲಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಒಟ್ಟು 77 ಆಟಗಾರರ ಆಯ್ಕೆಗೆ ಅವಕಾಶ ಇದೆ. ಅದರಲ್ಲಿ 30 ವಿದೇಶಿ ಆಟಗಾರರನ್ನು ಖರೀದಿಸಬೇಕು. ಹತ್ತು ತಂಡಗಳು ಸೇರಿ ₹ 262. 95 ಕೋಟಿ ವೆಚ್ಚ ಮಾಡಲು ಅವಕಾಶವಿದೆ.

ಆರ್‌ಸಿಬಿಯಿಂದ ಬಿಡುಗಡೆ ಯಾಗಿರುವ ಶ್ರೀಲಂಕಾದ ವಣಿಂದು ಹಸರಂಗಾ ಅವರಿಗೆ ₹ 1.5 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ.

ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT