ಐಪಿಎಲ್‌: ಹರಾಜಿಗೆ 346 ಮಂದಿ ಲಭ್ಯ

7

ಐಪಿಎಲ್‌: ಹರಾಜಿಗೆ 346 ಮಂದಿ ಲಭ್ಯ

Published:
Updated:

ನವದೆಹಲಿ: ರಾಜಸ್ಥಾನದ ಜೈಪುರದಲ್ಲಿ ಡಿಸೆಂಬರ್‌ 18ರಂದು ನಡೆಯುವ ಈ ಬಾರಿಯ ಐಪಿಎಲ್‌ ಹರಾಜಿಗೆ ಒಟ್ಟು 346 ಮಂದಿ ಆಟಗಾರರು ಲಭ್ಯರಿದ್ದಾರೆ.

ಬ್ರೆಂಡನ್‌ ಮೆಕ್ಲಮ್‌, ಕ್ರಿಸ್‌ ವೋಕ್ಸ್‌, ಲಸಿತ್‌ ಮಾಲಿಂಗ, ಶಾನ್‌ ಮಾರ್ಷ್‌, ಕಾಲಿನ್‌ ಇಂಗ್ರಾಮ್‌, ಕೋರಿ ಆ್ಯಂಡರ್ಸನ್‌, ಏಂಜೆಲೊ ಮ್ಯಾಥ್ಯೂಸ್‌, ಸ್ಯಾಮ್‌ ಕರನ್‌ ಮತ್ತು ಡಿ ಆರ್ಸಿ ಶಾರ್ಟ್‌ ಅವರು ₹2 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ.

ವೇಗದ ಬೌಲರ್‌ ಜಯದೇವ್‌ ಉನದ್ಕತ್‌ ₹1.5 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಅವರು ಹಿಂದಿನ ಆವೃತ್ತಿಯಲ್ಲಿ ₹11.5 ಕೋಟಿ ಮೊತ್ತ ಪಡೆದಿದ್ದರು.

ಯುವರಾಜ್‌ ಸಿಂಗ್‌, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಶಮಿ ಮತ್ತು ವೃದ್ಧಿಮಾನ್‌ ಸಹಾ ಅವರಿಗೆ ₹1 ಕೋಟಿ ಮೂಲ ಬೆಲೆ ನಿಗದಿ ಮಾಡಲಾಗಿದೆ.

ಚೇತೇಶ್ವರ ಪೂಜಾರ, ಮನೋಜ್‌ ತಿವಾರಿ, ಹನುಮ ವಿಹಾರಿ, ಗುರುಕೀರತ್‌ ಸಿಂಗ್‌ ಮತ್ತು ಮೋಹಿತ್‌ ಶರ್ಮಾ ಅವರ ಮೂಲ ಬೆಲೆ ₹ 50 ಲಕ್ಷ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !