ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ | ಮಾರ್ಚ್‌ 14ಕ್ಕೆ ಐಎಸ್‌ಎಲ್‌ ಫೈನಲ್‌

Last Updated 28 ಜನವರಿ 2020, 13:20 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯ ಫೈನಲ್‌ ಪಂದ್ಯವು ಮಾರ್ಚ್‌ 14ರಂದು ನಡೆಯಲಿದೆ.

ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ಮಂಗಳವಾರ ಈ ವಿಷಯ ತಿಳಿಸಿದೆ. ಪಂದ್ಯದ ಸ್ಥಳ ಇನ್ನೂ ಅಂತಿಮವಾಗಿಲ್ಲ.

‘ಮೊದಲ ಲೆಗ್‌ನ ಸೆಮಿಫೈನಲ್‌ ಪಂದ್ಯಗಳು ಫೆಬ್ರುವರಿ 29 ಮತ್ತು ಮಾರ್ಚ್‌ 1ರಂದು ನಿಗದಿಯಾಗಿವೆ. ಎರಡನೇ ಲೆಗ್‌ನ ಸೆಮಿಫೈನಲ್‌ ಪಂದ್ಯಗಳು ಮಾರ್ಚ್‌ 7 ಮತ್ತು 8ರಂದು ಜರುಗಲಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಾರಿಯ ಐಎಸ್‌ಎಲ್‌ನಲ್ಲಿ ಪ್ರಶಸ್ತಿ ಗೆದ್ದ ತಂಡವು 2021ರ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ನ ಗುಂಪು ಹಂತಕ್ಕೆ ನೇರ ಅರ್ಹತೆ ಗಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT