ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರ‍್ಯಾಂಕಿಂಗ್: ಯಶಸ್ವಿ ಜೈಸ್ವಾಲ್ 12ನೇ ಸ್ಥಾನಕ್ಕೆ

Published 28 ಫೆಬ್ರುವರಿ 2024, 14:35 IST
Last Updated 28 ಫೆಬ್ರುವರಿ 2024, 14:35 IST
ಅಕ್ಷರ ಗಾತ್ರ

ದುಬೈ: ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಬುಧವಾರ ಪ್ರಕಟವಾದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನಕ್ಕೇರಿದ್ದಾರೆ.

ವಿಕೆಟ್‌ ಕೀಪರ್ ಬ್ಯಾಟರ್ ಧ್ರುವ ಜುರೇಲ್ ಅವರೂ 31 ಸ್ಥಾನಗಳ ಬಡ್ತಿ ಪಡೆದು 69ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸದ್ಯ ಇಂಗ್ಲೆಂಡ್ ಎದುರು ನಡೆಯುತ್ತಿರುವ ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಜೈಸ್ವಾಲ್ ಅವರು 69ನೇ ಸ್ಥಾನದಲ್ಲಿದ್ದರು. ನಾಲ್ಕು ಟೆಸ್ಟ್‌ಗಳು ಮುಗಿದ ನಂತರ ಅವರು 12ನೇ ಸ್ಥಾನಕ್ಕೇರಿದ ಅಮೋಘ ಸಾಧನೆ ಮಾಡಿದ್ದಾರೆ. ಈ ಸರಣಿಯಲ್ಲಿ ಅವರು ಎರಡು ದ್ವಿಶತಕ ಗಳಿಸಿದ್ದಾರೆ. ಅಲ್ಲದೇ 600ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ್ದಾರೆ.

ರಾಂಚಿಯಲ್ಲಿ ಈಚೆಗೆ ಮುಗಿದ ಟೆಸ್ಟ್‌ನಲ್ಲಿ ಶ್ರೇಷ್ಠ ಆಟಗಾರ ಗೌರವ ಗಳಿಸಿದ ಜುರೆಲ್ ಕೂಡ ಗಮನಾರ್ಹ ಏರಿಕೆ ಸಾಧಿಸಿದ್ದಾರೆ.

ಇಂಗ್ಲೆಂಡ್ ತಂಡದ ಬ್ಯಾಟರ್ ಜೋ ರೂಟ್ ಅವರು ಅಗ್ರ ಮೂವರಲ್ಲಿ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಆರ್. ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳಲ್ಲಿ ರವೀಂದ್ರ ಜಡೇಜ ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT