ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌: ಶ್ರೀಲಂಕಾ ನೆರವಿಗೆ ಕರುಣಾರತ್ನೆ

Published 23 ಮಾರ್ಚ್ 2024, 14:06 IST
Last Updated 23 ಮಾರ್ಚ್ 2024, 14:06 IST
ಅಕ್ಷರ ಗಾತ್ರ

ಸಿಲ್ಹೆಟ್‌ (ಬಾಂಗ್ಲಾದೇಶ): ದಿಮುತ್‌ ಕರುಣಾರತ್ನೆ (52, 107 ಎಸೆತ) ಅವರ ಸಹನೆಯ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಬಾಂಗ್ಲಾದೇಶ ವಿರುದ್ಧ ತಂಡ ಉತ್ತಮ ಸ್ಥಿತಿಗೆ ತಲುಪಲು ನೆರವಾದರು

ಮೊದಲ ಇನಿಂಗ್ಸ್‌ನಲ್ಲಿ 92 ರನ್‌ಗಳ ಮುನ್ನಡೆ ಪಡೆದಿದ್ದ ಶ್ರೀಲಂಕಾ ಎರಡನೇ ಸರದಿಯಲ್ಲಿ 5 ವಿಕೆಟ್‌ಗೆ 119 ರನ್‌ ಗಳಿಸಿದೆ. ಅಂದರೆ ಒಟ್ಟಾರೆ 211 ರನ್‌ಗಳ ಮುನ್ನಡೆ.

ಮೊದಲ ಇನಿಂಗ್ಸ್‌ನಲ್ಲಿ 188 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ ಶ್ರೀಲಂಕಾದ ಎರಡನೇ ಇನಿಂಗ್ಸ್‌ನ  ಎರಡು ವಿಕೆಟ್‌ಗಳನ್ನು ಬೇಗನೇ ಪಡೆದು ತಿರುಗೇಟು ನೀಡುವಂತೆ ಕಂಡಿತ್ತು. ಆದರೆ ಕರುಣಾರತ್ನೆ ಆತಿಥೇಯರ ಮೇಲುಗೈಗೆ ಅಡ್ಡಿಯಾದರು.

ಸ್ಕೋರುಗಳು

ಮೊದಲ ಇನಿಂಗ್ಸ್‌: ಶ್ರೀಲಂಕಾ: 280; ಬಾಂಗ್ಲಾದೇಶ: 51.3 ಓವರುಗಳಲ್ಲಿ 188 (ತೈಜುಲ್ ಇಸ್ಲಾಂ 47, ಲಿಟ್ಟನ್ ದಾಸ್‌ 25‍; ವಿಶ್ವ ಫೆರ್ನಾಂಡೊ 48ಕ್ಕೆ4, ಕಸುನ್ ರೆಜಿತ 56ಕ್ಕೆ3, ಲಾಹಿರು ಕುಮಾರ 31ಕ್ಕೆ3)

ಎರಡನೇ ಇನಿಂಗ್ಸ್‌: ಶ್ರೀಲಂಕಾ: 36 ಓವರುಗಳಲ್ಲಿ 5 ವಿಕೆಟ್‌ಗೆ 119 (ದಿಮುತ್‌ ಕರುಣಾರತ್ನೆ 52, ಧನಂಜಯ ಡಿಸಿಲ್ವ ಔಟಾಗದೇ 23; ನಹೀದ್ ರಾಣಾ 42ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT