ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರಿತ್ಯ: ವಾರಾಣಸಿಯಲ್ಲಿ ಇಳಿದ ಕೋಲ್ಕತ್ತ ಆಟಗಾರರ ವಿಮಾನ

ಕೋಲ್ಕತ್ತದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಲ್ಯಾಂಡ್ ಆಗದ ವಿಮಾನ
Published 7 ಮೇ 2024, 13:25 IST
Last Updated 7 ಮೇ 2024, 13:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರು ಲಖನೌನಿಂದ ಪ್ರಯಾಣಿಸುತ್ತಿದ್ದ  ವಿಮಾನವನ್ನು ಕೋಲ್ಕತ್ತದಲ್ಲಿ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ವಿಮಾನವನ್ನು ವಾರಾಣಸಿಯಲ್ಲಿ ಇಳಿಸಲಾಯಿತು. 

ಇದರಿಂದಾಗಿ ಆಟಗಾರರು ವಾರಾಣಸಿಯಲ್ಲಿಯೇ ಆಟಗಾರರು ಇಡೀ ರಾತ್ರಿ ಕಳೆಯಬೇಕಾಯಿತು. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವು ಭಾನುವಾರದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಎದುರು 98 ರನ್‌ಗಳಿಂದ ಜಯಿಸಿತ್ತು. ಸೋಮವಾರ ಸಂಜೆ 5.45ಕ್ಕೆ ಲಖನೌ ವಿಮಾನ ನಿಲ್ದಾಣದಿಂದ ಕೋಲ್ಕತ್ತಕ್ಕೆ ಖಾಸಗಿ ವಿಮಾನದಲ್ಲಿ ಆಟಗಾರರು ಪಯಣಿಸಿದ್ದರು. ಈ ವಿಮಾನವು ನಿಗದಿಯ ವೇಳೆಯ ಪ್ರಕಾರ ರಾತ್ರಿ 7.25ಕ್ಕೆ ಕೋಲ್ಕತ್ತ ತಲುಪಬೇಕಿತ್ತು. 

ಆದರೆ ಕೋಲ್ಕತ್ತದಲ್ಲಿ ಹವಾಮಾನ ವೈಪರಿತ್ಯವಿದ್ದ ಕಾರಣ ವಿಮಾನವನ್ನು ಲ್ಯಾಂಡಿಂಗ್ ಮಾಡುವುದು ಸಾಧ್ಯವಿರಲಿಲ್ಲ. ಆದ್ದರಿಂದ ವಿಮಾನವನ್ನು ಮೊದಲು ಗುವಾಹಟಿ ಹಾಗೂ ನಂತರದ ದಲ್ಲಿ ವಾರಾಣಸಿಯಲ್ಲಿ ಲ್ಯಾಂಡಿಂಗ್ ಮಾಡಲಾಯಿತು. 

‘ಕೋಲ್ಕತ್ತದಲ್ಲಿ ವಹಾಮಾನ ವೈಪರಿತ್ಯ ಇರುವುದರಿಂದ ವಿಮಾನವನ್ನು ಸದ್ಯ ಗುವಾಹಟಿಯಲ್ಲಿ ಲ್ಯಾಂಡ್ ಮಾಡಲಾಗಿದೆ’ ಎಂದು ಕೆಕೆಆರ್ ಮಾಧ್ಯಮ ವಿಭಾಗವು ರಾತ್ರಿ 8.46ಕ್ಕೆ ಸಂದೇಶ ನೀಡಿತು. 

‘ಗುವಾಹಟಿಯಿಂದ  ನಮ್ಮ ಚಾರ್ಟರ್‌ ವಿಮಾನದ ಉಡಾವಣೆಗೆ ಹಸಿರು ನಿಶಾನೆ ದೊರೆತಿದೆ. ರಾತ್ರಿ 11ರ ಸುಮಾರಿಗೆ ಕೋಲ್ಕತ್ತ ತಲುಪುವ ನಿರೀಕ್ಷೆ  ಇದೆ’ ಫ್ರ್ಯಾಂಚೈಸಿಯು ತನ್ನ ಎರಡನೇ ಸಂದೇಶ ಹಾಕಿತು. 

ಆದರೆ ಆಟಗಾರರ ‘ಪ್ರಯಾಣ ಸಂಕಷ್ಟ’ ಇಷ್ಟಕ್ಕೇ ಮುಗಿಯಲಿಲ್ಲ. ಕೋಲ್ಕತ್ತದಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸದ ಕಾರಣ ಲ್ಯಾಂಡಿಂಗ್ ಅನುಮತಿ ದೊರೆಯಲಿಲ್ಲ. ಇದರಿಂದಾಗಿ ವಿಮಾನವನ್ನು ವಾರಾಣಸಿಗೆ ಕಳಿಸಲಾಯಿತು.

‘ಗುವಾಹತಿಯಿಂದ ಹೊರಟ ನಮ್ಮ ವಿಮಾನವು ರಾತ್ತಿ 11ಕ್ಕೆ ಕೋಲ್ಕತ್ತದಲ್ಲಿ ಇಳಿಯಬೇಕಿತ್ತು. ಆದರೆ ಹವಾಮಾನ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಹಲವು ಬಾರಿ ಲ್ಯಾಂಡಿಂಗ್ ಮಾಡುವ ಪ್ರಯತ್ನಗಳ ನಂತರವೂ ಸಾಧ್ಯವಾಗಲಿಲ್ಲ. ಆದ್ದರಿಂದ ವಾರಾಣಸಿಯಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲಾಯಿತು’ ಎಂದು ತಂಡದ ಮಾಧ್ಯಮ ವಿಭಾಗವು ತಡರಾತ್ರಿ 1.15ಕ್ಕೆ ಸಂದೇಶ ಹಾಕಿತು.

ಇದರಿಂದಾಗಿ ತಂಡವು ಇಡೀ ರಾತ್ರಿ ವಾರಾಣಸಿಯ ಹೋಟೆಲ್‌ನಲ್ಲಿ ಬೀಡು ಬಿಟ್ಟಿತು.

‘ನಾವು ಇದೀಗ ವಾರಾಣಸಿ ಹೋಟೆಲ್‌ಗೆ ಬಂದಿಳಿದಿದ್ದೇವೆ.  ಮಂಗಳವಾರ ಮಧ್ಯಾಹ್ನ ಕೋಲ್ಕತ್ತಕ್ಕೆ ತೆರಳುತ್ತೇವೆ’ ಎಂದು ಬೆಳಗಿನ ಜಾವ 3 ಗಂಟೆಗೊಂಡು ಸಂದೇಶವನ್ನು ಕೆಕೆಆರ್ ತಂಡವು ಹಾಕಿತು. 

ಕೋಲ್ಕತ್ತ ತಂಡವು ಇದೇ 11ರಂದು ಈಡನ್ ಗಾರ್ಡನ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT