ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ: ಧೋನಿ

7

ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ: ಧೋನಿ

Published:
Updated:
Deccan Herald

ಮುಂಬೈ: ‘ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿ ನುರಿತ ಆಟಗಾರನಾಗಿ ಹೊರಹೊಮ್ಮಿದ್ದಾರೆ. ನಿಸ್ಸಂದೇಹವಾಗಿ ಅವರೊಬ್ಬ ಶ್ರೇಷ್ಠ ಆಟಗಾರ’ ಎಂದು ಮಹೇಂದ್ರ ಸಿಂಗ್‌ ಧೋನಿ ಹೇಳಿದ್ದಾರೆ. 

ಮಂಗಳವಾರ ನಡೆದ ‘ರನ್‌ ಆ್ಯಡಂ’ ಎಂಬ ಆ್ಯಪ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧೋನಿ, ಈ ಆ್ಯಪ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. 

‘ಕ್ರಿಕೆಟ್‌ ಜಗತ್ತಿನ ದಂತಕತೆಯಾಗುವ ಸನಿಹದಲ್ಲಿದ್ದಾರೆ ಕೊಹ್ಲಿ. ಅವರ ಈ ಬೆಳವಣಿಗೆಯು ನನ್ನಲ್ಲಿ ಸಂತಸ ತಂದಿದೆ. ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿ ವಿರಾಟ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ’ ಎಂದು ಅವರು ಹೊಗಳಿದ್ದಾರೆ. 

‘ತಂಡವನ್ನು ಮುನ್ನಡೆಸುವ ಹಾಗೂ ಒಟ್ಟಿಗೆ ತೆಗೆದುಕೊಂಡು ಹೋಗುವ ಛಾತಿ ಅವರಲ್ಲಿದೆ’ ಎಂದು ಅವರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !