ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂಜನ್‌ ಆಲ್‌ರೌಂಡ್‌ ಆಟ

ಕೆಎಸ್‌ಸಿಎ ಗುಂಪು 2, ಎರಡನೇ ಡಿವಿಷನ್ ಟೂರ್ನಿ
Last Updated 27 ಮೇ 2022, 14:30 IST
ಅಕ್ಷರ ಗಾತ್ರ

ಬೆಂಗಳೂರು: ನಿರಂಜನ್‌ (125 ರನ್‌, 3 ವಿಕೆಟ್‌) ಅವರ ಆಲ್‌ರೌಂಡ್‌ ಆಟದ ಬಲದಿಂದ ಹಟ್ಟಿ ಗೋಲ್ಡ್ ಮೈನ್ಸ್ ಕ್ರಿಕೆಟ್‌ ಕ್ಲಬ್ ತಂಡವು ಕೆಎಸ್‌ಸಿಎ ಗುಂಪು ಎರಡರ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಇಲ್ಲಿ ನಡೆದ ಪಂದ್ಯದಲ್ಲಿ 101 ರನ್‌ಗಳಿಂದ ಬಿಇಎಂಎಲ್‌ ಸ್ಪೋರ್ಟ್ಸ್ ಕ್ಲಬ್‌ ಕೆಜಿಎಫ್‌ ತಂಡವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರು:ಗೋಲ್ಡ್ ಮೈನ್ಸ್ ಕ್ರಿಕೆಟ್‌ ಕ್ಲಬ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 (ನಿರಂಜನ್‌ 125, ಅಮಯ್ ತೇಜಸ್‌ 28, ಕಾಂತೇಶ್ 34ಕ್ಕೆ 3). ಬಿಇಎಂಎಲ್‌ ಸ್ಪೋರ್ಟ್ಸ್ ಕ್ಲಬ್‌, ಕೆಜಿಎಫ್‌: 20 ಓವರ್‌ಗಳಲ್ಲಿ 7ಕ್ಕೆ 90 (ಮೆಹಬೂಬ್ ಪಾಷ 6ಕ್ಕೆ 2, ನಿರಂಜನ್‌ 15ಕ್ಕೆ 3). ಫಲಿತಾಂಶ:ಹಟ್ಟಿ ಗೋಲ್ಡ್ ಮೈನ್ಸ್‌ಗೆ 101 ರನ್ ಜಯ.

ಕೆಪಿಟಿಸಿಎಲ್‌ ಎಸ್‌ಒ: 20 ಓವರ್‌ಗಳಲ್ಲಿ 5ಕ್ಕೆ 217 (ಎಸ್‌.ರಾಜಶೇಖರ್‌ 58, ಉದಯಕುಮಾರ್ ಅಂದಾನಪ್ಪ ವಾಲ್ಮೀಕಿ 89, ಭರತ್ ಗೌಡ 41; ರಾಜು ಕಲಾಲ್‌ 36ಕ್ಕೆ 2). ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯಾ: 19.5 ಓವರ್‌ಗಳಲ್ಲಿ 6ಕ್ಕೆ 218 (ಪರೀಕ್ಷಿತ್ ವಕ್ಕುಂದ 82, ಸೂರ್ಯ ಶ್ರೀನಿವಾಸ್‌ 89; ಗುರುಪ್ರಸಾದ್ ಕೆ.ಎಲ್‌. 33ಕ್ಕೆ 2, ಅನಿಲ್ ಕುಮಾರ್ 41ಕ್ಕೆ 2). ಫಲಿತಾಂಶ: ಯೂನಿಯನ್ ಬ್ಯಾಂಕ್‌ಗೆ 4 ವಿಕೆಟ್‌ಗಳ ಜಯ

ಡೆಲ್‌ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 6ಕ್ಕೆ 193 (ಅಭಿಜೀತ್ ಮಹಾಪಾತ್ರ 65, ಗಿರೀಶ್ ಕಲ್ಕೆರೆ ಔಟಾಗದೆ 31; ವಿ. ಶಂಕರ್‌ 33ಕ್ಕೆ 2). ಬೆಂಗಳೂರು ಟೆಲಿಫೋನ್ ಕ್ಲಬ್‌: 18.3 ಓವರ್‌ಗಳಲ್ಲಿ 129 (ಶಶಾಂಕ್ ಬಿ.ಕೆ. 20, ಶಹೀದ್‌ ಶರೀಫ್‌ 48, ಸಯ್ಯದ್‌ ಮುದಸ್ಸರ್‌ 37; ಅಮೇಯ ಶಾನ್‌ಬಾಗ್‌ 19ಕ್ಕೆ 2, ಸಂತೋಷ್‌ 10ಕ್ಕೆ 3, ಶಿಖರ್ ಶೆಟ್ಟಿ 30ಕ್ಕೆ 2). ಫಲಿತಾಂಶ: ಡೆಲ್ ಕ್ರಿಕೆಟ್‌ ಕ್ಲಬ್‌ಗೆ 64 ರನ್‌ಗಳ ಜಯ.

ಟ್ರಿಟನ್‌ ಸ್ಪೋರ್ಟ್ಸ್ ಕ್ಲಬ್, ಮೈಸೂರು: 20 ಓವರ್‌ಗಳಲ್ಲಿ 5ಕ್ಕೆ 200 (ಸಂಜಯ್ ಎನ್‌. 50, ಯೋಗೇಶ್ 119; ಜಯ ಪ್ರಕಾಶ್‌ ಪಿ.ಎಚ್‌. 30ಕ್ಕೆ 2). ಬಿಇಎಲ್‌ ಸ್ಪೋರ್ಟ್ಸ್: 15.5 ಓವರ್‌ಗಳಲ್ಲಿ 104 (ರಘುನಂದನ್‌ ಎಚ್‌ 32, ನವೀನ್ ಕುಮಾರ್ ಎಂ. 17ಕ್ಕೆ 2; ಶರ್ಬಿನ್‌ 16ಕ್ಕೆ 2, ಅಮೃತ್‌ರಾಜ್‌ ಡಿ. 27ಕ್ಕೆ 3, ಸಂಜಯ್ ಎನ್‌. 26ಕ್ಕೆ 3). ಟ್ರಿಟನ್‌ ಸ್ಪೋರ್ಟ್ಸ್ ಕ್ಲಬ್‌ಗೆ 96 ರನ್‌ಗಳ ಜಯ.

ಡೆಕ್ಕನ್ ಹೆರಾಲ್ಡ್‌ ಮತ್ತು ಪ್ರಜಾವಾಣಿ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 9ಕ್ಕೆ 114 (ಸಚಿನ್‌ ಎಸ್‌.ಎ. 48, ಗುಣಶೇಖರ್ ಎಸ್‌. 25; ಹೇಮಂತ್ ಕುಮಾರ್ ಎಲ್‌. 15ಕ್ಕೆ 3, ಧೀಮಂತ್‌ ಬಿ. 36ಕ್ಕೆ 2). ಬಿಇಎಂಎಲ್‌ (2) ಸ್ಪೋರ್ಟ್ಸ್ ಕ್ಲಬ್, ಮೈಸೂರು: 15.1 ಓವರ್‌ಗಳಲ್ಲಿ 1ಕ್ಕೆ 115 (ವಿಷ್ಣು ಪ್ರಿಯನ್‌ ಔಟಾಗದೆ 43, ಧೀಮಂತ್ ಬಿ. 41). ಫಲಿತಾಂಶ: ಬಿಇಎಂಎಲ್ ತಂಡಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT