ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSG vs CSK Match Highlights: ರಾಹುಲ್, ಡಿಕಾಕ್ ಶತಕದ ಜೊತೆಯಾಟ 

Published 20 ಏಪ್ರಿಲ್ 2024, 7:33 IST
Last Updated 20 ಏಪ್ರಿಲ್ 2024, 7:33 IST
ಅಕ್ಷರ ಗಾತ್ರ

ಲಖನೌ: ನಾಯಕ ಕೆ.ಎಲ್‌.ರಾಹುಲ್ ಅವರ ಬಿರುಸಿನ ಆಟದ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಐಪಿಎಲ್‌ ಪಂದ್ಯದಲ್ಲಿ ನಿರೀಕ್ಷೆಗಿಂತ ಸುಲಭವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 177 ರನ್‌ಗಳ ಗುರಿಯನ್ನು ಬೆಂಬತ್ತಿದ ಲಖನೌ 19 ಓವರುಗಳಲ್ಲಿ 2 ವಿಕೆಟ್‌ಗೆ 180 ರನ್ ಗಳಿಸಿ ಜಯಿಸಿತು. ಇದಕ್ಕೆ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್ ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತ್ತು.

ಹೈಲೈಟ್ಸ್‌...

  • ರಾಹುಲ್ 82, ಡಿಕಾಕ್ 54 ರನ್‌ ಸಿಡಿಸಿದರು.

  • ರಾಹುಲ್ ಮತ್ತು ಡಿಕಾಕ್ ನಡುವೆ ಇದು ಈ ಆವೃತ್ತಿಯಲ್ಲಿ ದಾಖಲಾದ ಮೊದಲ ಶತಕದ ಜೊತೆಯಾಟ ಎನಿಸಿತು.

  • ರಾಹುಲ್‌ ಅವರು ಜಡೇಜ ಹಿಡಿದ ಅಮೋಘ ಕ್ಯಾಚಿಗೆ ನಿರ್ಗಮಿಸಬೇಕಾಯಿತು.

  • ಚೆನ್ನೈ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ 57, ಮಹೇಂದ್ರಸಿಂಗ್ ಧೋನಿ 28, ಅಜಿಂಕ್ಯ ರಹಾನೆ 36, ಮೊಯಿನ್ ಅಲಿ 30 ರನ್‌ ಕಾಣಿಕೆ ನೀಡಿದರು.

  • ಲಖನೌ ತಂಡದ ಬೌಲರ್‌ಗಳಾದ ಮೊಹ್ಸಿನ್ ಖಾನ್, ಯಶ್ ಠಾಕೂರ್, ಸ್ಟೊಯಿನಿಸ್ ತಲಾ ಒಂದು ವಿಕೆಟ್‌ ಪಡೆದರು. ಕೃನಾಲ್‌ 2 ವಿಕೆಟ್‌ ಪಡೆದರು. 

  • ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಶಿವಂ ದುಬೆ ಲಯ ಕಾಣದೇ 3 ರನ್‌ಗೆ ಔಟಾದರು 

  • ಹಳದಿ ಬಣ್ಣದ ಜರ್ಸಿ ತೊಟ್ಟು, ಅದೇ ಬಣ್ಣದ ಬಾವುಟ ಹಿಡಿದಿದ್ದ ತಮ್ಮ ಅಭಿಮಾನಿಗಳನ್ನು ಮಹಿ ನಿರಾಶೆಗೊಳಿಸಲಿಲ್ಲ. 9 ಎಸೆತಗಳನ್ನು ಎದುರಿಸಿದ ಅವರು 28 ರನ್‌ ಗಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT