ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ ಟೂರ್ನಿಗೆ ಜಿಂಬಾಬ್ವೆ, ನೆದರ್ಲೆಂಡ್ಸ್

Last Updated 16 ಜುಲೈ 2022, 1:31 IST
ಅಕ್ಷರ ಗಾತ್ರ

ದುಬೈ/ಬುಲವಾಯೊ (ಪಿಟಿಐ): ನೆದರ್ಲೆಂಡ್ಸ್ ಮತ್ತು ಜಿಂಬಾಬ್ವೆ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿವೆ.

ಟಿ20 ವಿಶ್ವಕಪ್ ಕ್ವಾಲಿಫೈಯರ್ ಬಿ ಗುಂಪಿನ ನಾಲ್ಕರ ಘಟ್ಟದಲ್ಲಿ ನೆದರ್ಲೆಂಡ್ಸ್‌ ಏಳು ವಿಕೆಟ್‌ಗಳಿಂದ ಅಮೆರಿಕ ತಂಡವನ್ನು ಸೋಲಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಜಿಂಬಾಬ್ವೆ ತಂಡವು 27 ರನ್‌ಗಳಿಂದ ಪಪುವಾ ನ್ಯೂ ಗಿನಿ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 20 ಓವರ್‌ಗಳಲ್ಲಿ 5ಕ್ಕೆ199 (ಚಕೆಬ್ವಾ 30, ಕ್ರೇಗ್ ಎರ್ವಿನ್ 38, ಮ್ಯಾಡೆವರ್ 42, ರಝಾ 22, ಮಿಲ್ಟನ್ ಶುಂಭಾ ಔಟಾಗದೆ 29, ಸೆಸೆ ಬಾವು 32ಕ್ಕೆ2, ಚಾರ್ಲ್ಸ್ ಅಮಿನಿ 28ಕ್ಕೆ2), ಪಪುವಾ ನ್ಯೂಗಿನಿ: 20 ಓವರ್‌ಗಳಲ್ಲಿ 8ಕ್ಕೆ 172 (ಚಾರ್ಲ್ಸ್ ಅಮಿನಿ 31, ಟೋನಿ ಉರಾ 66, ಬ್ಲೆಸಿಂಗ್ ಮುಜರ್ಬಾನಿ 24ಕ್ಕೆ2) ಫಲಿತಾಂಶ: ಜಿಂಬಾಬ್ವೆಗೆ 27 ರನ್‌ಗಳ ಜಯ

ಅಮೆರಿಕ: 19.4 ಓವರ್‌ಗಳಲ್ಲಿ 138 (ಸ್ಟೀವನ್ ಟೇಲರ್ 26, ಮೊನಾಂಕ್ ಪಟೇಲ್ 32, ನಿಸರ್ಗ್ ಪಟೇಲ್ 28, ಬ್ಯಾಸ್ ಡೆ ಲೀಡ್ 23ಕ್ಕೆ2, ವ್ಯಾನ್ ಮೀಕೆರೆನ್ 22ಕ್ಕೆ2) ನೆದರ್ಲೆಂಡ್ಸ್: 19 ಓವರ್‌ಗಳಲ್ಲಿ 3ಕ್ಕೆ139 (ಬ್ಯಾಸ್ ಡಿ ಲೀಡ್ ಔಟಾಗದೆ 91, ಸ್ಕಾಟ್ ಎಡ್ವರ್ಡ್ಸ್ ಔಟಾಗದೆ 26) ಫಲಿತಾಂಶ: ನೆದರ್ಲೆಂಡ್ಸ್ ತಂಡಕ್ಕೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT