ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಂಟಿ ಕ್ರಿಕೆಟ್‌: ಪೂಜಾರ ದ್ವಿಶತಕದ ಸೊಬಗು

Last Updated 18 ಏಪ್ರಿಲ್ 2022, 12:53 IST
ಅಕ್ಷರ ಗಾತ್ರ

ಡರ್ಬಿ: ಭಾರತ ತಂಡಕ್ಕೆ ಮರಳುವ ತವಕದಲ್ಲಿರುವ ಅನುಭವಿ ಬ್ಯಾಟರ್‌ ಚೇತೇಶ್ವರ್ ಪೂಜಾರ ಕೌಂಟಿ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ.

ಸಸೆಕ್ಸ್‌ ಪರ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಡರ್ಬಿಶೈರ್ ಎದುರಿನ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 387 ಎಸೆತಗಳನ್ನು ಎದುರಿಸಿದ ಅವರು ಔಟಾಗದೆ 201 ರನ್ ಗಳಿಸಿದರು. 23 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.ನಾಯಕ ಟಾಮ್ ಹೇನ್ಸ್ ಹಾಗೂ ಪೂಜಾರ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 351 ರನ್‌ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಪೂಜಾರ 15 ಎಸೆತಗಳನ್ನು ಎದುರಿಸಿ ಕೇವಲ ಆರು ರನ್ ಗಳಿಸಿದ್ದರು.

ಭಾನುವಾರ ಈ ಪಂದ್ಯವು ಡ್ರಾನಲ್ಲಿ ಅಂತ್ಯವಾಯಿತು.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಸರಣಿಯ ಬಳಿಕ ಭಾರತ ತಂಡದಿಂದ ಪೂಜಾರ ಅವರನ್ನು ಕೈಬಿಡಲಾಗಿತ್ತು. ಭಾರತದಲ್ಲಿ ನಡೆದ ಶ್ರೀಲಂಕಾ ಎದುರಿನ ಸರಣಿಯ ಬಳಿಕ ಅಜಿಂಕ್ಯ ರಹಾನೆ ಅವರನ್ನೂ ತಂಡಕ್ಕೆ ಪರಿಗಣಿಸಿರಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಡರ್ಬಿಶೈರ್‌ 133 ಓವರ್‌ಗಳಲ್ಲಿ 8ಕ್ಕೆ 505 ಡಿಕ್ಲೇರ್‌. ಸಸೆಕ್ಸ್: 56.3 ಓವರ್‌ಗಳಲ್ಲಿ 174. ಎರಡನೇ ಇನಿಂಗ್ಸ್: ಸಸೆಕ್ಸ್ (ಫಾಲೋ ಆನ್‌) 176.1 ಓವರ್‌ಗಳಲ್ಲಿ 513 (ಟಾಮ್ ಹೇನ್ಸ್ 243, ಚೇತೇಶ್ವರ್ ಪೂಜಾರ ಔಟಾಗದೆ 201; ಸ್ಯಾಮ್ ಕೊನರ್ಸ್ 67ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT