ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ ಕ್ರಿಕೆಟಿಗನಿಗೆ ನಗದು ಬಹುಮಾನ: ವರದಿ ಅಲ್ಲಗಳೆದ ರತನ್ ಟಾಟಾ

Published 30 ಅಕ್ಟೋಬರ್ 2023, 16:42 IST
Last Updated 30 ಅಕ್ಟೋಬರ್ 2023, 16:42 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್‌ ಅವರಿಗೆ ನಗದು ಬಹುಮಾನ ನೀಡಲು ರತನ್ ಟಾಟಾ ಮುಂದಾಗಿದ್ದಾರೆ ಎಂಬ ತಮ್ಮ ಕುರಿತಾದ ಸುದ್ದಿಯನ್ನು ಕೈಗಾರಿಕೋದ್ಯಮಿ ರತನ್ ಟಾಟಾ ತಳ್ಳಿ ಹಾಕಿದ್ದಾರೆ. ಕ್ರಿಕೆಟ್‌ನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಜಾಲತಾಣ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಟಾಟಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಯಾವುದೇ ಕ್ರಿಕೆಟ್ ಆಟಗಾರರಿಗೆ ದಂಡ ಅಥವಾ ಬಹುಮಾನ ನೀಡುವ ಬಗ್ಗೆ ಐಸಿಸಿ ಅಥವಾ ಯಾವುದೇ ಕ್ರಿಕೆಟ್ ಮಂಡಳಿಗೆ ನಾನು ತಿಳಿಸಿಲ್ಲ’ ಎಂದು ಹೇಳಿದ್ದಾರೆ.

‘ನನ್ನ ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ಬರದ ಹೊರತು ಯಾವುದೇ ವಾಟ್ಸಾಪ್ ಫಾರ್ವರ್ಡ್‌ ಸಂದೇಶಗಳು ಮತ್ತು ಅಂತಹ ವಿಡಿಯೊಗಳನ್ನು ದಯವಿಟ್ಟು ನಂಬಬೇಡಿ’ಎಂದು ಟಾಟಾ ತಿಳಿಸಿದ್ದಾರೆ.

ರಶೀದ್ ಖಾನ್‌ ಅವರಿಗೆ ನಿರ್ದಿಷ್ಟ ನಗದು ಬಹುಮಾನ ನೀಡುವುದಾಗಿ ಟಾಟಾ ವಾಗ್ದಾನ ಮಾಡಿದ್ದಾರೆ ಎಂಬ ಸಂದೇಶವು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೆ ಟಾಟಾ ಹೇಳಿಕೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT