ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರನ್ನು ಕಠಿಣ ಸನ್ನಿವೇಶಗಳಿಗೆ ಒಡ್ಡಲಾಗುತ್ತಿದೆ: ರೋಹಿತ್ ಶರ್ಮಾ

Published 11 ಜನವರಿ 2024, 20:44 IST
Last Updated 11 ಜನವರಿ 2024, 20:44 IST
ಅಕ್ಷರ ಗಾತ್ರ

ಮೊಹಾಲಿ: ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಿದ್ಧರಾಗಲು  ನಮ್ಮ ತಂಡದ ಆಟಗಾರರನ್ನು  ಕಠಿಣ ಸನ್ನಿವೇಶಗಳಿಗೆ ಒಡ್ಡಲಾಗುತ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

ಗುರುವಾರ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಎಲ್ಲ ಆಯಾಮಗಳಿಂದಲೂ ಪ್ರಯತ್ನಿಸುತ್ತಿದ್ದೇವೆ.  ಯುವ  ಆಟಗಾರರಿಗೆ ಬೇಕೆಂತಲೇ ಕಠಿಣ ಸನ್ನಿವೇಶಗಳಿಗೆ ಒಡ್ಡುತ್ತಿದ್ದೇವೆ. ಇವತ್ತಿನ ಪಂದ್ಯದ 19ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರಿಗೆ ಇಂತಹ ಸವಾಲು ಎದುರಾಗಿತ್ತು’ ಎಂದರು.

‘ಈ ಪಂದ್ಯದಲ್ಲಿ ಶಿವಂ ದುಬೆ, ಜಿತೇಶ್ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ತಿಲಕ್ ಕೂಡ ಭರವಸೆ ಮೂಡಿಸಿದ್ದಾರೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT