ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್ | ಕ್ರೀಡಾಕ್ಷೇತ್ರ, ಪಿವಿವಿ ತಂಡಗಳಿಗೆ ಜಯ

Published 9 ಜೂನ್ 2024, 16:07 IST
Last Updated 9 ಜೂನ್ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾ ಕ್ಷೇತ್ರ ಮತ್ತು ಪಿವಿವಿ ತಂಡಗಳು ಗೋಪಾಲನ್‌ ಸ್ಪೋರ್ಟ್ಸ್‌ ಸೆಂಟರ್‌ ಆಶ್ರಯದಲ್ಲಿ ನಡೆಯುತ್ತಿರುವ ಸೇವ್‌ ವಾಟರ್‌ ಕಪ್‌ 7ನೇ ಆವೃತ್ತಿಯ 14 ವರ್ಷದೊಳಗಿನವರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದವು.

ಭಾನುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಿವಿವಿ ತಂಡವು ಸಿಕ್ಸ್‌ ಅಕಾಡೆಮಿ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಸಿಕ್ಸ್‌ ಅಕಾಡೆಮಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 140 ರನ್‌ ಗಳಿಸಿತು. ಪಿವಿವಿ ತಂಡವು 19.3 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 141 ರನ್‌ ಗಳಿಸಿ ಜಯ ಸಾಧಿಸಿತು.

ಮತ್ತೊಂದು ಸೆಮಿಫೈನಲ್‌ನಲ್ಲಿ ಕ್ರೀಡಾ ಕ್ಷೇತ್ರ ತಂಡವು ಇಐಓಸಿ ತಂಡವನ್ನು 59 ರನ್‌ಗಳಿಂದ ಮಣಿಸಿತು. ಕ್ರೀಡಾಕ್ಷೇತ್ರ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 123 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ಸಿಐಓಸಿ ತಂಡವು ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 64 ರನ್‌ ಗಳಿಸಿ ಸವಾಲನ್ನು ಅಂತ್ಯಗೊಳಿಸಿತು.

ಸಂಕ್ಷಿಪ್ತ ಸ್ಕೋರ್‌: ಸಿಕ್ಸ್ ಅಕಾಡೆಮಿ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 140 (ಪನ್ಷುಲ್‌ ಶರ್ಮಾ 68; ಚೇತನ್‌ 17ಕ್ಕೆ 2). ಪಿವಿವಿ 19.3 ಓವರ್‌ಗಳಲ್ಲಿ 3 ವಿಕೆಟ್‌ಗೆ 141 (ಪವನ್ ದೀಪ್  61, ಗಗನ್ ಯಶ್ ಪಾಲ್ ಔಟಾಗದೇ 34; ವ್ಯೂಮ್ ನಾಯ್ಡು 28ಕ್ಕೆ 3). ಫಲಿತಾಂಶ: ಪಿವಿವಿ ತಂಡಕ್ಕೆ 7 ವಿಕೆಟ್‌ಗಳ ಜಯ

ಕ್ರೀಡಾ ಕ್ಷೇತ್ರ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 123 (ತನ್ಷ್‌ ಕೃಷ್ಣ 31, ಇಶಾನ್ ಬೋಹ್ರಾ 30, ವಿವಾನ್ 25ಕ್ಕೆ 2). ಸಿಐಓಸಿ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 64 (ಕಾರ್ತಿಕ್ 20; ತನ್ಷ್‌ ಕೃಷ್ಣ 3ಕ್ಕೆ2, ವಿಕ್ರಮ್ 12ಕ್ಕೆ 2, ನೀವ್ ಬಿ. 10ಕ್ಕೆ2). ಫಲಿತಾಂಶ: ಕ್ರೀಡಾ ಕ್ಷೇತ್ರಕ್ಕೆ 59 ರನ್‌‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT