ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಕ್ಕೆ ಶೇನ್ ವಾರ್ನ್ ಪಾರ್ಥಿವ ಶರೀರ

Last Updated 10 ಮಾರ್ಚ್ 2022, 18:31 IST
ಅಕ್ಷರ ಗಾತ್ರ

ಬ್ಯಾಂಕಾಕ್ (ಎಎಫ್‌ಪಿ): ಈಚೆಗೆ ನಿಧನರಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ಪಾರ್ಥಿವ ಶರೀರವನ್ನು ಬ್ಯಾಂಕಾಕ್‌ನಿಂದ ಅವರ ತವರು ಆಸ್ಟ್ರೇಲಿಯಾಕ್ಕೆ ರವಾನಿಸಲಾಯಿತು.

52 ವರ್ಷದ ಶೇನ್ ಅವರು ಥಾಯ್ಲೆಂಡ್‌ನ ಕೊಹ್ ಸಮುಯ್‌ ದ್ವೀಪದ ವಿಲ್ಲಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಥಾಯ್ಲೆಂಡ್ ಸರ್ಕಾರವು ಪಾರ್ಥಿವ ಶರೀರವನ್ನು ಗುರುವಾರ ಖಾಸಗಿ ವಿಮಾನದ ಮೂಲಕ ಆಸ್ಪ್ರೇಲಿಯಾಕ್ಕೆ ಕಳುಹಿಸಿಕೊಟ್ಟಿತು.

ಬೆಳಿಗ್ಗೆ 8.24ಕ್ಕೆ ಆಸ್ಟ್ರೇಲಿಯಾ ಧ್ವಜ ಹೊದಿಸಲಾಗಿದ್ದ ಶೇನ್ ಪಾರ್ಥಿವ ಶರೀರವನ್ನು ಅಲಂಕೃತ ಪೆಟ್ಟಿಗೆಯಲ್ಲಿಟ್ಟು ಆಸ್ಟ್ರೇಲಿಯಾದ ನಿಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಥಾಯ್ಲೆಂಡ್ ವಿಮಾನಯಾನ ಅಧಿಕಾರಿಗಳು ದೃಢಪಡಿಸಿದ್ದಾರೆ.

ವಾರ್ನ್ ಅವರದ್ದು ಸಹಜ ಸಾವು ಎಂದು ಅಟಾಪ್ಸಿಯಲ್ಲಿ ದೃಢಪಟ್ಟಿದೆ. ಲೆಗ್‌ಸ್ಪಿನ್ ಬೌಲಿಂಗ್‌ನಲ್ಲಿ ದಂತಕಥೆಯೇ ಆಗಿರುವ ಶೇನ್ ಅಂತಿಮ ಸಂಸ್ಕಾರವನ್ನು ಇದೇ 30ರಂದು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಕ್ವಿನ್ಸ್‌ಲ್ಯಾಂಡ್ ಸರ್ಕಾರವು ಈಗಾಗಲೇ ಘೋಷಿಸಿದೆ.

ಅವರಿಗೆ ಅಂತಿಮ ನಮನ ಸಲ್ಲಿಸಲು ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT