ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಾನ ಮೈಲಿಗಲ್ಲು: ಗಂಗೂಲಿ, ಕೊಹ್ಲಿ ದಾಖಲೆ ಮುರಿದ ಸ್ಫೋಟಕ ಬ್ಯಾಟ್ಸ್‌ವುಮನ್‌

Last Updated 7 ನವೆಂಬರ್ 2019, 9:06 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಅವರ ಅಮೋಘ ಪ್ರದರ್ಶನದಿಂದಾಗಿ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರನೇ ಏಕ ದಿನ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕಸರಣಿ ಗೆದ್ದುಕೊಂಡಿತ್ತು.

ಈ ಪಂದ್ಯದಲ್ಲಿಮಂದಾನ 74 ರನ್‌ ಗಳಿಸಿಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ದಾಖಲೆ ಮುರಿದುಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2–1ರಲ್ಲಿಸರಣಿಯನ್ನು ತನ್ನದಾಗಿಸಿಕೊಂಡಿತು.ಕಾಲ್ಬೆರಳಿನ ಗಾಯದ ಕಾರಣ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಪಂದ್ಯದಿಂದ ಮಂದಾನ ಹೊರಗುಳಿದಿದ್ದರು. ಎರಡನೇ ಪಂದ್ಯದಲ್ಲಿ ತಂಡವನ್ನು ಸೆರಿಕೊಂಡಿದ್ದರು. ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ 74 ರನ್‌ ಸಿಡಿಸಿ ಭಾರತದಗೆಲುವಿಗೆ ಕಾರಣರಾಗಿ ಪಂದ್ಯದಶ್ರೇಷ್ಠ ಆಟಗಾರ್ತಿಯಾದರು.

ಮಂದಾನ ಮೈಲಿಗಲ್ಲು...

ಏಕದಿನ ಪಂದ್ಯಗಳಲ್ಲಿ ಚೇಸಿಂಗ್‌ ಇನ್ನಿಂಗ್ಸ್‌ನಲ್ಲಿ 9 ಅರ್ಧ ಶತಕ ದಾಖಲಿಸಿದ್ದ ನ್ಯೂಜಿಲೇಂಡ್‌ನ ಸುಜಿ ಬೇಟ್ಸ್‌ ಅವರ ದಾಖಲೆಯನ್ನು ಮಂದಾನ ಸರಿಗಟ್ಟಿದ್ದಾರೆ. ಮಂದಾನ ಅವರು 9ಚೇಸಿಂಗ್‌ ಇನ್ನಿಂಗ್ಸ್‌ಗಳಿಂದ 110.5ರ ಸರಾಸರಿಯಲ್ಲಿ 663 ರನ್‌ಗಳನ್ನು ದಾಖಲಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ ವೇಗದ 2000ರನ್‌ ದಾಖಲಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂಪಾತ್ರರಾಗಿದ್ದಾರೆ. ಈ ಹಿಂದೆ ಸೌರವ್‌ ಗಂಗೂಲಿ 52 , ವಿರಾಟ್‌ ಕೊಹ್ಲಿ 53 ಮತ್ತು ನವಜೋತ್‌ ಸಿಂಗ್ ಸಿಧು ಅವರು 52 ಇನ್ನಿಂಗ್ಸ್‌ಗಳಲ್ಲಿ2000 ರನ್‌ಗಳನ್ನು ಪೂರೈಸಿದ್ದರು. ಮಂದಾನ 51 ಪಂದ್ಯಗಳಲ್ಲಿ 2000 ರನ್‌ ಗಡಿ ದಾಟುವ ಮೂಲಕ ಗಂಗೂಲಿ ಮತ್ತು ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. 48 ಪಂದ್ಯಗಳಲ್ಲಿ 2000 ರನ್‌ ಗಳಿಸಿರುವ ದಾಖಲೆ ಶಿಖರ್‌ ಧವನ್‌ ಅವರ ಹೆಸರಿನಲ್ಲಿದೆ.

51 ಏಕ ದಿನ ಪಂದ್ಯಗಳನ್ನು ಆಡಿರುವ ಮಂದಾನ ಅವರು 43.08 ಸರಾಸರಿಯಲ್ಲಿ 2025 ರನ್‌ ಗಳಿಸಿದ್ದಾರೆ. ಇದರಲ್ಲಿ 17 ಅರ್ಧ ಶತಕ ಹಾಗೂ 4 ಶತಕಗಳು ಸೇರಿವೆ. ಮಹಿಳಾ ಕ್ರಿಕೆಟ್‌ನಲ್ಲಿ ವೇಗದ 2000 ರನ್‌ ಗಳಿಸಿರುವ ವಿಶ್ವದ ಮೂರನೇ ಆಟಗಾರ್ತಿಯಾಗಿದ್ದಾರೆ. ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್‌ 41 ಪಂದ್ಯಗಳಲ್ಲಿ 2000ರನ್‌ಗಳನ್ನು ಪೂರೈಸಿ ಮೊದಲ ಸ್ಥಾನದಲ್ಲಿದ್ದಾರೆ.

ಪುರುಷರ ಕ್ರಿಕೆಟ್‌ನಲ್ಲಿ ನಿವೃತ್ತಿ ಪಡೆದಿರುವ ದಕ್ಷಿಣ ಆಫ್ರಿಕಾದ ಹಸೀಮ್‌ ಆಮ್ಲ 40 ಪಂದ್ಯಗಳಲ್ಲಿ 2000ರನ್‌ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT