ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ದಕ್ಷಿಣ ಆಫ್ರಿಕಾ

Last Updated 28 ಫೆಬ್ರುವರಿ 2020, 19:27 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ : ದಕ್ಷಿಣ ಆಫ್ರಿಕಾ ತಂಡ, ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕಿ ದಾಖಲೆ ಬರೆದಿದೆ.

ಶುಕ್ರವಾರ ನಡೆದ ಥಾಯ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಹರಿಣಗಳ ತಂಡ ಈ ಸಾಧನೆ ಮಾಡಿದೆ.

ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಲಿಜೆಲ್‌ ಲೀ (101; 60ಎ, 16ಬೌಂ, 3ಸಿ) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 195ರನ್‌ ಕಲೆಹಾಕಿತು. ಲೀ ಅವರು ಚುಟುಕು ಮಾದರಿಯಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಶಬನೀಮ್‌ ಇಸ್ಲಾಯಿಲ್‌ (8ಕ್ಕೆ3) ಮತ್ತು ಸ್ಯೂನ್‌ ಲೂಸ್‌ (15ಕ್ಕೆ3) ಅವರ ದಾಳಿಗೆ ಕಂಗೆಟ್ಟ ಥಾಯ್ಲೆಂಡ್‌ 19.1 ಓವರ್‌ಗಳಲ್ಲಿ 82ರನ್‌ಗಳಿಗೆ ಆಲೌಟ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT