ಕ್ರಿಕೆಟ್‌: ಸ್ವಸ್ತಿಕ್‌ ಯೂನಿಯನ್‌ಗೆ ಪ್ರಶಸ್ತಿ

ಬುಧವಾರ, ಜೂನ್ 19, 2019
28 °C

ಕ್ರಿಕೆಟ್‌: ಸ್ವಸ್ತಿಕ್‌ ಯೂನಿಯನ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಜಸ್ವಂತ್‌ ಆಚಾರ್ಯ (135; 137ಎ, 13ಬೌಂ, 6ಸಿ) ಮತ್ತು ದೇವದತ್ತ ಪಡಿಕ್ಕಲ್‌ (99) ಅವರ ಆಕರ್ಷಕ ಆಟದಿಂದಾಗಿ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2) ತಂಡವು ಕೆಎಸ್‌ಸಿಎ 19 ವರ್ಷದೊಳಗಿನವರ ಅಂತರ ಕ್ಲಬ್‌ (ಗುಂಪು–1, ಡಿವಿಷನ್‌–1, 2,3) ಕ್ರಿಕೆಟ್‌ ಟೂರ್ನಿಯಲ್ಲಿ ಟ್ರೋಫಿ ಜಯಿಸಿದೆ.

ಫೈನಲ್‌ನಲ್ಲಿ ಸ್ವಸ್ತಿಕ್‌ ಯೂನಿಯನ್‌ ತಂಡವು ಬೆಂಗಳೂರು ಅಕೇಷನಲ್ಸ್‌ ಎದುರು ಡ್ರಾ ಮಾಡಿಕೊಂಡಿತು. ಇನಿಂಗ್ಸ್‌ ಮುನ್ನಡೆ ಪಡೆದಿದ್ದರಿಂದ ತಂಡಕ್ಕೆ ಪ್ರಶಸ್ತಿ ಲಭಿಸಿತು.

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): ಮೊದಲ ಇನಿಂಗ್ಸ್‌: 91.4 ಓವರ್‌ಗಳಲ್ಲಿ 379 (ಜಸ್ವಂತ್ ಆಚಾರ್ಯ 135, ದೇವದತ್ತ ಪಡಿಕ್ಕಲ್‌ 99, ಆಯುಷ್‌ ಕುಮಾರ್‌ ಬಾರಿಕ್‌ 34, ಶುಭಂ ಕುಮಾರ್‌ ಸಿನ್ಹಾ 42; ಭೀಮ ರಾವ್‌ 69ಕ್ಕೆ3, ಎಸ್‌ಎಸ್‌ಜಿ ರೋಹಿತ್‌ 160ಕ್ಕೆ3, ಹೃಷಿಕೇಶ್‌ 26ಕ್ಕೆ2). ಎರಡನೇ ಇನಿಂಗ್ಸ್‌: 20.5 ಓವರ್‌ಗಳಲ್ಲಿ 3 ವಿಕೆಟ್‌ಗೆ 191 ಡಿಕ್ಲೇರ್ಡ್‌ (ಜಸ್ವಂತ್‌ ಆಚಾರ್ಯ 35, ದೇವದತ್ತ ಪಡಿಕ್ಕಲ್‌ 82, ಮೊಹಮ್ಮದ್‌ ಎ ಜವಾದ್‌ ಔಟಾಗದೆ 51; ಯುವರಾಜ್‌ ಸಿಂಗ್‌ 27ಕ್ಕೆ2).

ಬೆಂಗಳೂರು ಅಕೇಷನಲ್ಸ್‌: ಪ್ರಥಮ ಇನಿಂಗ್ಸ್‌: 46.1 ಓವರ್‌ಗಳಲ್ಲಿ 173 (ಜಿ.ರಿತಿನ್‌ ಕ್ರಿಸ್ಟಿ 27, ಭೀಮ ರಾವ್‌ 31, ಶ್ರೀಹರಿ ಪಿ.ಮದ್ಯಾಲಕರ್‌ 48; ತನೀಷ್‌ ಮಹೇಶ್‌ 25ಕ್ಕೆ3, ಎನ್‌.ಎ.ಚಿನ್ಮಯ್‌ 42ಕ್ಕೆ3, ಶುಭಂ ಕುಮಾರ್‌ ಸಿನ್ಹಾ 31ಕ್ಕೆ3).

ಫಲಿತಾಂಶ: ಡ್ರಾ. ಸ್ವಸ್ತಿಕ್‌ ಯೂನಿಯನ್‌ಗೆ ಇನಿಂಗ್ಸ್‌ ಮುನ್ನಡೆ ಹಾಗೂ ಪ್ರಶಸ್ತಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !