ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಆಸ್ಟ್ರೇಲಿಯಾ, ಬಾಂಗ್ಲಾ ಹಣಾಹಣಿ ಇಂದು

Published 21 ಜೂನ್ 2024, 1:24 IST
Last Updated 21 ಜೂನ್ 2024, 1:24 IST
ಅಕ್ಷರ ಗಾತ್ರ

ನಾರ್ತ್‌ಸೌಂಡ್, ಆ್ಯಂಟಿಗಾ: ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಸೂಪರ್ 8ರ ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ  ಶುಕ್ರವಾರ ಬಾಂಗ್ಲಾದೇಶ ಎದುರು ಕಣಕ್ಕಿಳಿಯಲಿದೆ. 

ಸಾಮರ್ಥ್ಯದ ದೃಷ್ಟಿಯಿಂದ ಬಾಂಗ್ಲಾಗಿಂತ ಆಸ್ಟ್ರೇಲಿಯಾವು ಬಲಾಢ್ಯವಾಗಿದೆ. 2021ರಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯಾ ತಂಡವು ಈ ಬಾರಿಯೂ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. 

ಆದರೆ ಬಾಂಗ್ಲಾದೇಶ ತಂಡವೂ ಆಘಾತ ನೀಡುವ ಸಾಮರ್ಥ್ಯ ಹೊಂದಿದೆ. ನಜ್ಮುಲ್ ಹುಸೆನ್ ಶಾಂತೊ  ನಾಯಕತ್ವದ ತಂಡದ ಬೌಲರ್‌ಗಳಾದ  ಶಕೀಬ್ ಅಲ್ ಹಸನ್,  ಮುಸ್ತಫಿಜುರ್ ರೆಹಮಾನ್, ಮೆಹಮುದುಲ್ಲಾ ಮತ್ತು ತಸ್ಕಿನ್ ಅಹಮದ್ ಅವರು ಉತ್ತಮ ಲಯದಲ್ಲಿದ್ದಾರೆ. 

ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಿರತೆಯ ಕೊರತೆ ಇದೆ. ಆಸ್ಟ್ರೇಲಿಯಾದ ಬೌಲಿಂಗ್ ಪಡೆ ಬಲಾಢ್ಯವಾಗಿದೆ.  ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್ ಹಾಗೂ ಸ್ಪಿನ್ನರ್ ಆ್ಯಡಂ ಜಂಪಾ  ಅವರನ್ನು ಎದುರಿಸುವುದು ಬಾಂಗ್ಲಾ ತಂಡಕ್ಕೆ ಪ್ರಮುಖ ಸವಾಲಾಗಿದೆ. 

ಪಂದ್ಯ ಆರಂಭ: ಬೆಳಿಗ್ಗೆ 6

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್

ಶಕೀಬ್ ಅಲ್ ಹಸನ್ 
ಶಕೀಬ್ ಅಲ್ ಹಸನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT