ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಜಯ

Published 12 ಜೂನ್ 2024, 4:43 IST
Last Updated 12 ಜೂನ್ 2024, 4:43 IST
ಅಕ್ಷರ ಗಾತ್ರ

ಆಂಟಿಗುವಾ: ಇಲ್ಲಿ ನಡೆದ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ನಮೀಬಿಯಾ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿತು. 

ಮೊದಲು ಬ್ಯಾಟ್‌ ಮಾಡಿದ ನಮೀಬಿಯಾ 17 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 72 ರನ್‌ ಮಾತ್ರಗಳಿಸಿತು. ನಮೀಬಿಯಾ ಪರವಾಗಿ ನಾಯಕ ಎರಸ್ಮಾಸ್‌ 36 ರನ್‌ ಹೊಡೆದು ಗಮನ ಸೆಳೆದರು. 

ಮಾರಕ ದಾಳಿ ನಡೆಸಿದ ಆಸ್ಟ್ರೇಲಿಯಾದ ಜಂಪಾ 4 ವಿಕೆಟ್‌, ಹಾಜೆಲ್‌ವುಡ್‌, ಸ್ಟೊಯಿನ್ಸ್‌ ತಲಾ 2 ವಿಕೆಟ್‌ ಪಡೆದರು.

ಈ ಕಡಿಮೆ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 5.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 74 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ನಮೀಬಿಯಾ ಪರ ಡೇವಿಡ್‌ ಒಂದು ವಿಕೆಟ್‌ ಪಡೆದರು.

ಸ್ಕೋರ್‌...

ನಮೀಬಿಯಾ: 72/10 (17 ಓವರ್‌)

ಆಸ್ಟ್ರೇಲಿಯಾ:  74/1 (5.4 ಓವರ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT