ಮಂಗಳವಾರ, ಸೆಪ್ಟೆಂಬರ್ 24, 2019
29 °C
ಪಾಕಿಸ್ತಾನ ಪ್ರವಾಸಕ್ಕೆ ಶ್ರೀಲಂಕಾ ತಂಡ ಪ್ರಕಟ

ಶ್ರೀಲಂಕಾ: ತಿರಿಮಾನ್ನೆಗೆ ನಾಯಕತ್ವ

Published:
Updated:
Prajavani

ಕ್ಯಾಂಡಿ : ಲಾಹಿರು ತಿರಿಮಾನ್ನೆ ಮತ್ತು ದಸುನ್‌ ಶನಕ ಅವರನ್ನು ಮುಂಬರುವ ಪಾಕಿಸ್ತಾನ ಪ್ರವಾಸಕ್ಕೆ ಶ್ರೀಲಂಕಾದ ಏಕದಿನ ಹಾಗೂ ಟ್ವೆಂಟಿ–20 ತಂಡಗಳ ನಾಯಕರನ್ನಾಗಿ ಹೆಸರಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ 10 ಆಟಗಾರರು ಸರಣಿಯಿಂದ ಹೊರಗುಳಿದಿದ್ದಾರೆ.

ತಂಡದ ಹಾಲಿ ನಾಯಕರಾಗಿದ್ದ ದಿಮುತ್‌ ಕರುಣಾರತ್ನೆ ಹಾಗೂ ಲಸಿತ್‌ ಮಾಲಿಂಗ ಅವರು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಸಕ್ತಿ ತೋರಿದ್ದರು.

ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ತಿರಿಮಾನ್ನೆ ಹಾಗೂ ದಸುನ್‌ ಅವರಿಗೆ ಅವಕಾಶ ನೀಡಿದೆ. 

ಮಿನೋದ್‌ ಬನುಕಾ ಅವರು ಏಕದಿನ ಹಾಗೂ ಟ್ವೆಂಟಿ–20 ತಂಡಕ್ಕೆ ಆಯ್ಕೆಯಾಗಿರುವ ಹೊಸ ಮುಖ. ಸೆಪ್ಟೆಂಬರ್‌ 27– ಅಕ್ಟೋಬರ್‌ 9ರ ಅವಧಿಯಲ್ಲಿ ಪಾಕಿಸ್ತಾನ ಎದುರು ಶ್ರೀಲಂಕಾ ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಏಕದಿನ ತಂಡ: ಲಾಹಿರು ತಿರಿಮಾನ್ನೆ (ನಾಯಕ), ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಆವಿಷ್ಕಾ ಫರ್ನಾಂಡೊ, ಓಶಾದ ಫರ್ನಾಂಡೊ, ಸ್ನೇಹನ್‌ ಜಯಸೂರ್ಯ, ದಸುನ್‌ ಶನಕ, ಮಿನೋದ್‌ ಭಾನುಕಾ, ಆ್ಯಂಜೆಲೊ ಪೆರೆರಾ, ವನಿಂದು ಹಸರಂಗ, ಲಕ್ಷಣ್‌ ಸಂಡಕನ್‌, ನುವಾನ್‌ ಪ್ರದೀಪ್‌, ಕಸುನ್‌ ರಜಿತ, ಲಹಿರು ಕುಮಾರ.

 

Post Comments (+)