ಮಂಗಳವಾರ, ಆಗಸ್ಟ್ 20, 2019
25 °C
ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಬೃಹತ್‌ ಮೊತ್ತದತ್ತ ಕೆಎಸ್‌ಸಿಎ ಇಲೆವನ್‌

ಡೇಗಾ ನಿಶ್ಚಲ್‌ ಆಕರ್ಷಕ ಶತಕ

Published:
Updated:
Prajavani

ಬೆಂಗಳೂರು: ಡೇಗಾ ನಿಶ್ಚಲ್‌ (ಬ್ಯಾಟಿಂಗ್‌ 156 (259ಎ, 15 ಬೌಂ) ಮತ್ತು ಕರುಣ್‌ ನಾಯರ್‌ (93 ರನ್‌) ಅವರು ಮಂಗಳವಾರ ಕೇರಳ ಕ್ರಿಕೆಟ್‌ ಸಂಸ್ಥೆಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಇವರ ಅಮೋಘ ಜೊತೆಯಾಟದ ನೆರವಿನಿಂದ ಕೆಎಸ್‌ಸಿಎ ಇಲೆವನ್‌ ತಂಡ ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬೃಹತ್‌ ಮೊತ್ತದತ್ತ ಮುನ್ನಡೆದಿದೆ.

ಐಎಎಫ್‌ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೆಎಸ್‌ಸಿಎ ಇಲೆವನ್‌ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 3 ವಿಕೆಟ್‌ಗೆ 300ರನ್‌ ದಾಖಲಿಸಿದೆ.

ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಕರುಣ್‌ ಮತ್ತು ನಿಶ್ಚಲ್‌ 308 ಎಸೆತಗಳಲ್ಲಿ 197ರನ್‌ ಸೇರಿಸಿ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಇಲೆವನ್‌: ಮೊದಲ ಇನಿಂಗ್ಸ್‌; 88 ಓವರ್‌ಗಳಲ್ಲಿ 3 ವಿಕೆಟ್‌ಗೆ 300 (ಡಿ.ನಿಶ್ಚಲ್‌ ಬ್ಯಾಟಿಂಗ್‌ 156, ಅಭಿಷೇಕ್‌ ರೆಡ್ಡಿ 29, ಕರುಣ್‌ ನಾಯರ್‌ 93; ಕೆ.ಎಂ.ಆಸೀಫ್‌ 66ಕ್ಕೆ2).

ಆರ್‌ಎಸ್‌ಐ ಮೈದಾನ: ಟೀಮ್‌ ರಾಜಸ್ಥಾನ: ಪ್ರಥಮ ಇನಿಂಗ್ಸ್‌, 90 ಓವರ್‌ಗಳಲ್ಲಿ 8 ವಿಕೆಟ್‌ಗೆ 325 (ಯಶ್‌ 35, ಚೇತನ್‌ ಬಿಷ್ಠ್‌ 49, ರಾಬಿನ್‌ ಬಿಷ್ಠ್‌ 101, ಮಣಿಂದರ್‌ ಸಿಂಗ್‌ 54, ತೇಜಿಂದರ್‌ ಸಿಂಗ್‌ ಬ್ಯಾಟಿಂಗ್‌ 43; ಸಂತೋಕ್‌ ಸಿಂಗ್‌ 72ಕ್ಕೆ2, ಎಂ.ವೆಂಕಟೇಶ್‌ 63ಕ್ಕೆ3). (ಕೆಎಸ್‌ಸಿಎ ಕೋಲ್ಟ್ಸ್‌ ಎದುರಿನ ಪಂದ್ಯ).

ಆಲೂರಿನ ಮೊದಲನೇ ಮೈದಾನ: ಮುಂಬೈ ಕ್ರಿಕೆಟ್‌ ಸಂಸ್ಥೆ: 54.1 ಓವರ್‌ಗಳಲ್ಲಿ 190 (ಏಕನಾಥ್‌ ಕೇರ್ಕರ್‌ 44, ಸಿದ್ದಾರ್ಥ್‌ ಆಕ್ರೆ 20, ಶಶಾಂಕ್‌ ಅತ್ತಾರ್ಡೆ 30, ವಿಜಯ್‌ ಗೋಹಿಲ್‌ 20; ವೀರಪ್ರತಾಪ್‌ ಸಿಂಗ್‌ 41ಕ್ಕೆ2, ಸೌರಭ್‌ ಖೈರಾವರ್‌ 48ಕ್ಕೆ2, ಬಿನ್ನಿ ಸ್ಯಾಮುಯೆಲ್‌ 34ಕ್ಕೆ5).

ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ: 35 ಓವರ್‌ಗಳಲ್ಲಿ 2 ವಿಕೆಟ್‌ಗೆ 106 (ಜೀವನ್‌ಜ್ಯೋತ್‌ ಸಿಂಗ್‌ 51, ರಿಷಭ್‌ ತಿವಾರಿ ಬ್ಯಾಟಿಂಗ್‌ 48; ಶಶಾಂಕ್‌ ಅತ್ತಾರ್ಡೆ 30ಕ್ಕೆ2).

ಆಲೂರಿನ ಎರಡನೇ ಮೈದಾನ: ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 310 (ಪ್ರಿಯಾಂಶು ಖಂಡೂರಿ 48, ಪ್ರಶಾಂತ್‌ ಚೋಪ್ರಾ 57, ಅಂಕಿತ್‌ ಕಾಲ್ಸಿ 22, ಏಕಾಂತ್‌ ಸೇನ್‌ 74, ರಾಘವ್‌ ಧವನ್‌ ಬ್ಯಾಟಿಂಗ್‌ 59; ರಮೇಶ್‌ ಪ್ರಸಾದ್‌ 82ಕ್ಕೆ3). (ಬಂಗಾಳ ಕ್ರಿಕೆಟ್‌ ಸಂಸ್ಥೆ ಎದುರಿನ ಪಂದ್ಯ).

ಎಂ.ಚಿನ್ನಸ್ವಾಮಿ ಕ್ರೀಡಾಂಗಣ: ಡಿ.ವೈ.ಪಾಟೀಲ ಅಕಾಡೆಮಿ: 90 ಓವರ್‌ಗಳಲ್ಲಿ 8 ವಿಕೆಟ್‌ಗೆ 300 (ಆಷಯ್‌ ಸರ್ದೇಸಾಯಿ ಬ್ಯಾಟಿಂಗ್‌ 112, ನೌಷದ್‌ ಶೇಖ್‌ 38, ಶುಭಂ ರಂಜಾನೆ 50, ಅಮನ್‌ ಖಾನ್‌ 43; ತಷ್ಕಿನ್‌ ಅಹಮದ್‌ 33ಕ್ಕೆ2, ತೈಜುಲ್‌ ಇಸ್ಲಾಂ 135ಕ್ಕೆ4) (ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಇಲೆವನ್‌ ವಿರುದ್ಧದ ಪಂದ್ಯ).

ಕಿಣಿ ಸ್ಪೋರ್ಟ್ಸ್‌ ಅರೇನಾ: ವಿದರ್ಭ ಕ್ರಿಕೆಟ್‌ ಸಂಸ್ಥೆ: 90 ಓವರ್‌ಗಳಲ್ಲಿ 3 ವಿಕೆಟ್‌ಗೆ 340 (ಪವನ್‌ ಪ್ರಣತೆ 91, ಗಣೇಶ್‌ ಸತೀಶ್‌ ಬ್ಯಾಟಿಂಗ್‌ 160, ಯಶ್‌ ರಾಥೋಡ್‌ ಬ್ಯಾಟಿಂಗ್‌ 77). (ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌ ಎದುರಿನ ಪಂದ್ಯ).

ಮೈಸೂರಿನಲ್ಲಿ ನಡೆದ ಪಂದ್ಯಗಳು: ಎಸ್‌ಜೆಸಿಇ ಮೈದಾನ: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: 84 ಓವರ್‌ಗಳಲ್ಲಿ 9 ವಿಕೆಟ್‌ಗೆ 284 (ಶಿಶಿರ್‌ ಭವಾನೆ 45, ಪವನ್‌ ದೇಶಪಾಂಡೆ 80, ರಿತೇಶ್‌ ಭಟ್ಕಳ 47, ಭವೇಶ್‌ ಗುಲೇಚಾ ಬ್ಯಾಟಿಂಗ್‌ 48; ಬಿ.ಅಯ್ಯಪ್ಪ 61ಕ್ಕೆ2, ಜಿ.ಮನೀಷ್‌ 40ಕ್ಕೆ4). (ಆಂಧ್ರ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯ).

ಎಸ್‌ಡಿಆರ್‌ಎನ್‌ಡಬ್ಲ್ಯು ಮೈದಾನ: ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ: 75.2 ಓವರ್‌ಗಳಲ್ಲಿ 228 (ಅರ್ಣವ್‌ ಸಿನ್ಹಾ 95, ಉತ್ಕರ್ಷ್‌ ಸಿಂಗ್‌ 27, ಸುಮಿತ್‌ ಕುಮಾರ್‌ 43, ವರುಣ್‌ ಆ್ಯರನ್‌ 21; ಶರನ್ಸ್‌ ಜೈನ್‌ 33ಕ್ಕೆ5, ಮಿಹಿರ್‌ ಹಿರ್ವಾನಿ 65ಕ್ಕೆ2). (ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯ).

Post Comments (+)