ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BAN vs SL T20i | ದೊಡ್ಡ ಮೊತ್ತದತ್ತ ಲಂಕಾ

ಅಂತಿಮ ಟೆಸ್ಟ್‌: ಮುಂದುವರಿದ ಬಾಂಗ್ಲಾ ಬವಣೆ
Published 30 ಮಾರ್ಚ್ 2024, 13:35 IST
Last Updated 30 ಮಾರ್ಚ್ 2024, 13:35 IST
ಅಕ್ಷರ ಗಾತ್ರ

ಚಿತ್ತಗಾಂಗ್‌: ಅಗ್ರ ಕ್ರಮಾಂಕದ ಬ್ಯಾಟ್ಸಮನ್ನರ ಉತ್ತಮ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ತಂಡ ಶನಿವಾರ ಆರಂಭವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದೊಡ್ಡ ಮೊತ್ತದತ್ತ ಕಾಲಿಟ್ಟಿದೆ. ಮೊದಲ ದಿನದಾಟ ಮುಗಿದಾಗ 4 ವಿಕೆಟ್‌ಗೆ 314 ರನ್ ಗಳಿಸಿದೆ.

ಕುಶಲ್ ಮೆಂಡಿಸ್‌ ಅತಿ ಹೆಚ್ಚು– 93 ರನ್ (4x11, 6x1) ಗಳಿಸಿದರೆ, ಆರಂಭ ಆಟಗಾರರಾದ ದಿಮುತ್‌ ಕರುಣಾರತ್ನೆ (86) ಮತ್ತು ನಿಶಾನ್ ಮದುಷ್ಕ (57) ಕೂಡ ಅತ್ಯುಪಯುಕ್ತ ಕಾಣಿಕೆ ನೀಡಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 96 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು.‌

ದಿನೇಶ್ ಚಾಂದಿಮಲ್ (ಅಜೇಯ 34) ಅವರೊಂದಿಗೆ ನಾಯಕ ಧನಂಜಯ ಡಿಸಿಲ್ವ (ಔಟಾಗದೇ 15) ಎರಡನೇ ದಿನ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಬಾಂಗ್ಲಾ ತಂಡಕ್ಕೆ ಶಕೀಬ್ ಅಲ್ ಹಸನ್ ಪುನರಾಗಮನ ಮಾಡಿದರೆ, ಹಸನ್ ಮಹಮುದ್ ಪದಾರ್ಪಣೆ ಅವಕಾಶ ಪಡೆದರು. ಶಕೀಬ್, ಕುಶಲ್ ಮೆಂಡಿಸ್ ವಿಕೆಟ್‌ ಕೂಡ ಪಡೆದರು. ಲಂಕಾ ತಂಡದಲ್ಲಿ ಗಾಯಾಳು ಕಸುನ್ ರೆಜಿತ ಬದಲು ಅಸಿತ ಫೆರ್ನಾಂಡೊ ಅವಕಾಶ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT