ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್‌ನಿಂದ ವಿಶಾಖಪಟ್ಟಣಕ್ಕೆ ಏಕದಿನ ಪಂದ್ಯ ಸ್ಥಳಾಂತರ

Last Updated 3 ಅಕ್ಟೋಬರ್ 2018, 16:07 IST
ಅಕ್ಷರ ಗಾತ್ರ

ಮುಂಬೈ: ವೆಸ್ಟ್ ಇಂಡೀಸ್ ಎದುರಿನ ಎರಡನೇ ಏಕದಿನ ಪಂದ್ಯವನ್ನು ಇಂದೋರ್‌ನಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ.

ಇಂದೋರ್ ಕ್ರೀಡಾಂಗಣದಲ್ಲಿ ಉಚಿತ ಟಿಕೆಟ್ (ಪಾಸ್) ನೀಡುವ ವಿಚಾರದಲ್ಲಿ ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಡುವಣ ಭಿನ್ನಾಭಿಪ್ರಾಯ ಮೂಡಿತ್ತು. ಬಿಸಿಸಿಐನ ನೂತನ ನಿಯಮದ ಪ್ರಕಾರ ಶೇಕಡಾ 90ರಷ್ಟು ಟಿಕೆಟ್‌ಗಳನ್ನು ಸಾರ್ವಜನಿಕರ ಮಾರಾಟಕ್ಕೆ ಮೀಸಲಿಡಬೇಕು. ಉಳಿದ ಟಿಕೆಟ್‌ಗಳನ್ನು ಉಚಿತ (ಕಾಂಪ್ಲಿಮೆಂಟರಿ) ಹಂಚಬೇಕು.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಒಟ್ಟು 27,500 ಆಸನಗಳಿವೆ. ಆದ್ದರಿಂದ 2750 ಟಿಕೆಟ್‌ಗಳನ್ನು ಉಚಿತವಾಗಿ ನೀಡಬೇಕು. ಅವುಗಳನ್ನು ಪ್ರಾಯೋಜಕರಿಗೇ ನೀಡಬೇಕು ಎಂದು ಬಿಸಿಸಿಐ ಸೂಚಿಸಿತ್ತು. ಆದರೆ ಎಂಪಿಸಿಎ ಇದಕ್ಕೆ ಒಪ್ಪಿರಲಿಲ್ಲ.ಇದರಿಂದಾಗಿ ಅಸಮಾಧಾನಗೊಂಡ ಬಿಸಿಸಿಐ ಪಂದ್ಯವನ್ನು ಸ್ಥಳಾಂತರ ಮಾಡಿದೆ.

ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವು ಅಕ್ಟೋಬರ್ 24ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT