ಕ್ರಿಕೆಟ್‌: ಬ್ಲೂ–ಗ್ರೀನ್‌ ಪೈಪೋಟಿ

7

ಕ್ರಿಕೆಟ್‌: ಬ್ಲೂ–ಗ್ರೀನ್‌ ಪೈಪೋಟಿ

Published:
Updated:

ಬೆಂಗಳೂರು: ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಸಾರಥ್ಯದ ಇಂಡಿಯಾ ಬ್ಲೂ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಮುಂದಾಳತ್ವದ ಇಂಡಿಯಾ ಗ್ರೀನ್‌ ತಂಡಗಳು ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಬಲಿಷ್ಠ ತಂಡಗಳ ನಡುವಣ ಈ ಹೋರಾಟಕ್ಕೆ ಆಲೂರಿನ ಮೂರನೆ ಮೈದಾನದಲ್ಲಿ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್‌ ಎದುರು ಸೋತಿರುವ ಬ್ಲೂ ತಂಡ ಈ ಪೈಪೋಟಿಯಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮಿಥಾಲಿ ಮತ್ತು ಕರ್ನಾಟಕದ ವಿ.ಆರ್.ವನಿತಾ ಅವರು ಬ್ಯಾಟಿಂಗ್‌ನಲ್ಲಿ ಬ್ಲೂ ತಂಡದ ಬೆನ್ನೆಲುಬಾಗಿದ್ದಾರೆ. ಇವರಿಗೆ ಇತರ ಬ್ಯಾಟ್ಸ್‌ವುಮನ್‌ಗಳಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ಗ್ರೀನ್‌ ತಂಡ ಕೂಡಾ ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದೆ. ಜೆಮಿಮಾ ರಾಡ್ರಿಗಸ್‌, ಸುಷ್ಮಾ ವರ್ಮಾ ಮತ್ತು ವೇದಾ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಕರ್ನಾಟಕದ ರಾಜೇಶ್ವರಿ ಗಾಯಕವಾಡ, ಜೂಲನ್‌ ಗೋಸ್ವಾಮಿ, ಸುಕನ್ಯ ಫರೀದಾ, ಫಾತೀಮಾ ಜಾಫರ್‌, ಪ್ರಿಯಾ ಪೂನಿಯಾ ಮತ್ತು ದೇವಿಕಾ ವೈದ್ಯ ಅವರೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಆರಂಭ: ಬೆಳಿಗ್ಗೆ 10.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !