ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL 2024 | ಯುಪಿ ಗೆಲುವಿಗೆ 161 ರನ್ ಗುರಿ ಒಡ್ಡಿದ ಮುಂಬೈ

Published 7 ಮಾರ್ಚ್ 2024, 15:52 IST
Last Updated 7 ಮಾರ್ಚ್ 2024, 15:52 IST
ಅಕ್ಷರ ಗಾತ್ರ

ದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಗುರುವಾರ) ನಡೆಯುತ್ತಿರುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ ಗೆಲುವಿಗೆ ಮುಂಬೈ ಇಂಡಿಯನ್ಸ್ 161 ರನ್‌ಗಳ ಗುರಿಯನ್ನು ಒಡ್ದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಯಸ್ತಿಕಾ ಭಾಟಿಯಾ (9) ಹಾಗೂ ಎಚ್. ಮಾಥ್ಯೂಸ್ (4) ವಿಕೆಟ್‌ಗಳು 17 ರನ್ ಗಳಿಸುವಷ್ಟರಲ್ಲಿ ನಷ್ಟವಾಯಿತು.

ಬಳಿಕ ನತಾಲಿ ಶೀವರ್ ಬ್ರಂಟ್ (45) ನಾಯಕಿ ಹರ್ಮನ್‌ಪ್ರೀತ್ ಕೌರ್ (33) ಹಾಗೂ ಅಮೆಲಿಯಾ ಕೆರ್ (39) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು.

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಎಸ್.ಸಂಜನಾ, ತಂಡದ ಮೊತ್ತ 160ರ ಗಡಿ ತಲುಪಲು ನೆರವಾದರು. ಸಂಜನಾ ಕೇವಲ 14 ಎಸೆತಗಳಲ್ಲಿ 22 ರನ್ ಗಳಿಸಿ (4 ಬೌಂಡರಿ) ಅಜೇಯರಾಗುಳಿದರು.

ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಯುಪಿ ವಾರಿಯರ್ಸ್ ಪರ ಚಮರಿ ಅಟ್ಟಪಟ್ಟು ಎರಡು ವಿಕೆಟ್ ಗಳಿಸಿದರು.

ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಹಾಗೂ ಯುಪಿ ಪಾಲಿಗೆ ಈ ಪಂದ್ಯ ಮಹತ್ವದೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT