ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್‌: ವೃಂದಾ ಶತಕ- ಕರ್ನಾಟಕಕ್ಕೆ ಜಯ

ಬೌಲಿಂಗ್‌ನಲ್ಲಿ ಮಿಂಚಿದ ಪೂಜಾ, ಅನನ್ಯಾ
Published 18 ಡಿಸೆಂಬರ್ 2023, 15:57 IST
Last Updated 18 ಡಿಸೆಂಬರ್ 2023, 15:57 IST
ಅಕ್ಷರ ಗಾತ್ರ

ರಾಯಪುರ: ವೃಂದಾ ದಿನೇಶ್‌ ಅವರ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್‌ ಟ್ರೋಫಿ ಟೂರ್ನಿಯಲ್ಲಿ 55 ರನ್‌ಗಳಿಂದ ಬರೋಡಾ ತಂಡವನ್ನು ಮಣಿಸಿತು.

ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು ವೃಂದಾ ದಿನೇಶ್‌ (117; 69ಎ, 4x15, 6x5) ಅವರ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 181 ರನ್‌ ಗಳಿಸಿತು.

ಗುರಿಯನ್ನು ಬೆನ್ನಟ್ಟಿದ ಬರೋಡಾ ತಂಡವು ಕರ್ನಾಟಕದ ಬೌಲಿಂಗ್‌ ದಾಳಿಯ ಎದುರು 20 ಓವರ್‌ಗಳಲ್ಲಿ 126 ರನ್‌ಗಳಿಗೆ ಕುಸಿಯಿತು. ಕರ್ನಾಟಕದ ಪರ ಪೂಜಾ ಕುಮಾರಿ ಮತ್ತು ಅನನ್ಯಾ ಹೆಗ್ಡೆ ಕ್ರಮವಾಗಿ ನಾಲ್ಕು, ಮೂರು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 181 (ವೃಂದಾ ದಿನೇಶ್ 117, ಜಿ.ಆರ್. ಪ್ರೇರಣಾ ಔಟಾಗದೆ 28). ಬರೋಡಾ: 20 ಓವರ್‌ಗಳಲ್ಲಿ 126 (ಅಮೃತಾ ಜೋಸೆಫ್ 35, ಸಿ.ಜೆ. ದೇಸಾಯಿ 25; ಅನನ್ಯಾ ಹೆಗ್ಡೆ 24ಕ್ಕೆ3, ಎಂ. ಪೂಜಾ ಕುಮಾರಿ 32ಕ್ಕೆ 4)

ಫಲಿತಾಂಶ: ಕರ್ನಾಟಕಕ್ಕೆ 55 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT