ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WPL 2024 | ಸ್ಮೃತಿ, ಪೆರಿ ಅಬ್ಬರ; ಯುಪಿಗೆ 199 ರನ್ ಗುರಿ ನೀಡಿದ ಆರ್‌ಸಿಬಿ

Published 4 ಮಾರ್ಚ್ 2024, 14:19 IST
Last Updated 4 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮೃತಿ ಮಂದಾನ ಹಾಗೂ ಎಲಿಸ್ ಪೆರಿ ಗಳಿಸಿದ ಆಕರ್ಷಕ ಅರ್ಧಶತಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಯುಪಿ ವಾರಿಯರ್ಸ್‌ ವಿರುದ್ಧ ಬೃಹತ್‌ ಮೊತ್ತ ಕಲೆಹಾಕಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 198 ರನ್ ಕಲೆಹಾಕಿದೆ.

ಆರ್‌ಸಿಬಿಗೆ ನಾಯಕಿ ಸ್ಮೃತಿ ಹಾಗೂ ಸಬ್ಬಿನೇನಿ ಮೇಘನಾ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ ಕೇವಲ 5.3 ಓವರ್‌ಗಳಲ್ಲಿ 51 ರನ್ ಗಳಿಸಿತು. ಮೇಘನಾ (28) ಔಟಾದ ನಂತರ ಸ್ಮೃತಿ ಹಾಗೂ ಪೆರಿ ಆಟ ಕಳೆಗಟ್ಟಿತು.

ಆರಂಭದಲ್ಲಿ ನಿಧಾನಗತಿಯಲ್ಲಿ ರನ್‌ ಗಳಿಸಿದ ಪೆರಿ ಏಕಾಏಕಿ ಬೀಸಾಟವಾಡಿದರು. ಈ ಇಬ್ಬರು 2ನೇ ವಿಕೆಟ್‌ಗೆ 95 ರನ್‌ ಸೇರಿಸಿದರು.

ಸ್ಮೃತಿ ಕೇವಲ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 80 ರನ್ ಸಿಡಿಸಿದರು. ಪೆರಿ 37 ಎಸೆತಗಳಲ್ಲಿ 58 ರನ್ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ ತಲಾ ನಾಲ್ಕು ಬೌಂಡರಿ ಮತ್ತು ಸಿಕ್ಸರ್‌ಗಳಿದ್ದವು.

ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರಿಚಾ ಘೋಷ್‌ 10 ಎಸೆತಗಳಲ್ಲಿ 21 ರನ್‌ ಗಳಿಸಿ, ತಂಡದ ಮೊತ್ತವನ್ನು ಇನ್ನೂರರ ಸನಿಹಕ್ಕೆ ಕೊಂಡೊಯ್ದರು.

ಹನ್ನೊಂದರ ಬಳಗ
ಆರ್‌ಸಿಬಿ:
ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರಿ, ರಿಚಾ ಘೋಷ್, ಸೋಫಿ ಮಾಲಿನ್‌, ಏಕ್ತಾ ಬಿಷ್ಠ್‌, ಜಾರ್ಜಿಯಾ ವೇರ್ಹ್ಯಾಮ್, ಸಿಮ್ರಾನ್ ಬಹದ್ದೂರ್, ಶೋಭನಾ ಆಶಾ, ರೇಣುಕಾ ಸಿಂಗ್

ಯುಪಿ: ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ಚಾಮರಿ ಅಟಪಟ್ಟು, ಗ್ರೇಸ್ ಹ್ಯಾರಿಸ್, ಶ್ರೇತಾ ಶೆಹ್ರಾವತ್, ದೀಪ್ತಿ ಶರ್ಮಾ, ಪೂನಮ್ ಖೆಮ್ನರ್, ಸೋಫಿ ಎಕ್ಲೆಸ್ಟೋನ್‌, ರಾಜೇಶ್ವರಿ ಗಾಯಕವಾಡ್, ಸೈಮಾ ಠಾಕೊರ್‌, ಅಂಜಲಿ ಸರ್ವಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT