ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ಲೀಗ್‌ |ಆರ್‌ಡಬ್ಲ್ಯುಎಫ್‌ ತಂಡ ಜಯಭೇರಿ

Published 1 ಮಾರ್ಚ್ 2024, 22:30 IST
Last Updated 1 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವೀಣ್‌ ಕುಮಾರ್‌ ಎಸ್‌. ಅವರ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಆರ್‌ಡಬ್ಲ್ಯುಎಫ್‌ ಎಫ್‌ಸಿ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 8–1 ರಿಂದ ಬೆಂಗಳೂರು ಗನ್ನರ್ಸ್‌ ತಂಡದ ವಿರುದ್ಧ ಸುಲಭ ಜಯ ದಾಖಲಿಸಿತು.

ಬೆಂಗಳೂರು ಫುಟ್‌ಬಾಲ್‌ ಮೈದಾನ ದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ಪರ ಪ್ರವೀಣ್‌ (52, 66, 78ನೇ ನಿಮಿಷ) ಮೂರು, ಮಿಘೆಲ್ ಗೇಬ್ರೇಲ್ ನೈಲ್ (53, 80+1ನೇ) ಎರಡು ಹಾಗೂ ಪ್ರಕಾಶ್‌ ಚಂದ್ರ (5ನೇ), ಯೋಗಿತ್‌ (19ನೇ), ಜಯವಂದನ್ ಸಿಗಮಣಿ (32ನೇ) ತಲಾ ಒಂದು ಗೋಲು ಗಳಿಸಿದರು. ಗನ್ನರ್ಸ್‌ ಪರ ರಿವಾಲ್ಡೊ ಜೆ.ಸಿ. ಏಕೈಕ ಗೋಲು ತಂದಿತ್ತರು. ಇತರ ಪಂದ್ಯದಲ್ಲಿ ಬಿಟಿಎಂ ಎಫ್‌ಸಿ ತಂಡವು 2–1ರಿಂದ ಬ್ಲಿಟ್ಜ್‌ ಎಫ್‌ಸಿಯನ್ನು ಸೋಲಿಸಿತು. ಪರಿಕ್ರಮ ಎಫ್‌ಸಿ ತಂಡವು 4–0 ಯಿಂದ ಶ್ರೀ ಗಜಾನನ ಎಫ್‌ಸಿ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT