ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಎಫ್‌ಸಿಗೆ ಮ್ಯಾನ್ಯುಯೆಲ್ ಮಾರ್ಕ್ವಜ್ ಕೋಚ್‌

Last Updated 31 ಆಗಸ್ಟ್ 2020, 14:30 IST
ಅಕ್ಷರ ಗಾತ್ರ

ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಹೈದರಾಬಾದ್ ಫುಟ್‌ಬಾಲ್ ಕ್ಲಬ್ ಸ್ಪೇನ್‌ನಮ್ಯಾನ್ಯುಯೆಲ್ ಮಾರ್ಕ್ವಜ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ತಂಡದ ಕೋಚ್ ಆಗಿದ್ದ ಆಲ್ಬರ್ಟ್ ರೋಕಾ ಅವರು ಎಫ್‌ಸಿ ಬಾರ್ಸಿಲೋನಾ ತಂಡವನ್ನು ಸೇರಲು ಈಚೆಗೆ ತೆರಳಿದ್ದರು.

51 ವರ್ಷದ ಮ್ಯಾನ್ಯುಯೆಲ್ ಈ ಹಿಂದೆ ಸ್ಪಾನಿಸ್ ಲಾ ಲೀಗಾ ಟೂರ್ನಿಯಲ್ಲಿ ಆಡಿದ ತಂಡಗಳಲ್ಲೂ ಕ್ರೊವೇಷ್ಯಾದ ಪ್ರಮುಖ ತಂಡಗಳಲ್ಲೂ ಕೋಚ್ ಆಗಿದ್ದರು. ಹೈದರಾಬಾದ್ ತಂಡದೊಂದಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಂಡಿದ್ದು 2020–21ರ ಐಎಸ್‌ಎಲ್ ಆವೃತ್ತಿಯಲ್ಲಿ ತರಬೇತಿ ನೀಡಲಿದ್ದಾರೆ.

‘ಹೈದರಾಬಾದ್ ಎಫ್‌ಸಿಯಲ್ಲಿ ಕಾರ್ಯನಿರ್ವಹಿಸುವುದು ದೊಡ್ಡ ಸವಾಲೇ ಸರಿ. ತಂಡದ ತರಬೇತಿ ಸದ್ಯದಲ್ಲೇ ಆರಂಭವಾಗಬೇಕಿದೆ. ಕೆಲವು ತಿಂಗಳಿಂದ ತಂಡ ಗಂಭೀರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ನನಗೆ ತಂಡದಲ್ಲಿ ನೆಲೆ ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕಾದೀತು’ ಎಂದುಮ್ಯಾನ್ಯುಯೆಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT