ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್: 27 ಆಟಗಾರರ ತಂಡ ಪ್ರಕಟ

ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಗೊಗೊಯ್‌, ಹಮ್ಮದ್‌ ಹೊರಕ್ಕೆ
Published 24 ಮೇ 2024, 16:15 IST
Last Updated 24 ಮೇ 2024, 16:15 IST
ಅಕ್ಷರ ಗಾತ್ರ

ಭುವನೇಶ್ವರ: ಜೂನ್ 6ರಂದು ಕೋಲ್ಕತ್ತದಲ್ಲಿ ನಡೆಯುವ ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಕ್ಕಾಗಿ ಭಾರತ 27 ಆಟಗಾರರ ತಂಡ ಪ್ರಕಟಿಸಿದ್ದು, ಫಾರ್ವರ್ಡ್ ಆಟಗಾರ ಪಾರ್ಥಿಬ್ ಗೊಗೊಯ್ ಮತ್ತು ಡಿಫೆಂಡರ್ ಮುಹಮ್ಮದ್ ಹಮ್ಮದ್ ಗಾಯದ ಕಾರಣ ಹೊರಗುಳಿದಿದ್ದಾರೆ. ಸುದೀರ್ಘ ಅವಧಿಗೆ ತಂಡದ ನಾಯಕನಾಗಿರುವ ಸುನಿಲ್‌ ಚೆಟ್ರಿ ಅವರಿಗೆ ಇದು ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ. 

ಭುವನೇಶ್ವರದಲ್ಲಿ ತರಬೇತಿ ಶಿಬಿರದಲ್ಲಿದ್ದ ಒಟ್ಟು 32 ಆಟಗಾರರ ಪೈಕಿ ಫುರ್ಬಾ ಲಚೆನ್ಪಾ, ಪಾರ್ಥಿಬ್, ಇಮ್ರಾನ್ ಖಾನ್, ಹಮ್ಮದ್ ಮತ್ತು ಜಿತಿನ್ ಎಂಎಸ್ ಅವರನ್ನು ಬಿಡುಗಡೆ ಮಾಡಲಾಗಿದೆ. ಉಳಿದವರು ಮೇ 29ರವರೆಗೆ ತರಬೇತಿ ಮುಂದುವರಿಸಲಿದ್ದು, ಅವರು ಕೋಲ್ಕತ್ತಗೆ ಪ್ರಯಾಣಿಸಲಿದ್ದಾರೆ. 

‘ತಂಡದ ಆಟಗಾರರು ಕಠಿಣ ಪರಿಶ್ರಮಿಗಳು. ವಿಶೇಷವಾಗಿ ಜಿತಿನ್ ಮತ್ತು ಪಾರ್ಥಿಬ್ ಅವರ ಸ್ಥಾನಕ್ಕೆ ಸ್ಪರ್ಧೆ ನಿಜವಾಗಿಯೂ ಪ್ರಬಲವಾಗಿದೆ’ ಎಂದು ಮುಖ್ಯ ಕೋಚ್‌ ಇಗೊರ್ ಸ್ಟಿಮ್ಯಾಚ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಾರ್ಥಿಬ್ ಮತ್ತು ಹಮ್ಮದ್ ಕೆಲವು ದಿನಗಳ ಹಿಂದೆ ಗಾಯಗಳಿಂದ ಬಳಲುತ್ತಿದ್ದರು ಮತ್ತು 7-14 ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಅವರು ಗಾಯಗಳ ಸ್ವರೂಪವನ್ನು ನಿರ್ದಿಷ್ಟಪಡಿಸದೆ ಹೇಳಿದರು.

ಕುವೈತ್ ವಿರುದ್ಧದ ಪಂದ್ಯದ ನಂತರ, ಭಾರತ ಜೂನ್ 11 ರಂದು ಕತಾರ್ ವಿರುದ್ಧ ಎ ಗುಂಪಿನ ಕೊನೆಯ ಎರಡು ಪಂದ್ಯಗಳನ್ನು ಆಡಲಿದೆ. ನಾಲ್ಕು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿರುವ ಭಾರತ ಸದ್ಯ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಅರ್ಹತೆ ಪಡೆಯಲಿವೆ ಮತ್ತು 2027ರ ಎಎಫ್‌ಸಿ ಏಷ್ಯನ್ ಕಪ್‌ಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಲಿವೆ.  

ತಂಡ: ಗೋಲ್ ಕೀಪರ್ಸ್: ಗುರ್‌ಪ್ರೀತ್‌ ಸಿಂಗ್ ಸಂಧು, ಅಮರಿಂದರ್ ಸಿಂಗ್, ವಿಶಾಲ್ ಕೈತ್, ಡಿಫೆಂಡರ್ಸ್: ಅಮ್ಮಿ ರಣವಾಡೆ, ಅನ್ವರ್ ಅಲಿ, ಜಯ್ ಗುಪ್ತಾ, ಲಾಲ್‌ಚುಂಗ್ನುಂಗಾ, ಮೆಹತಾಬ್ ಸಿಂಗ್, ನರೇಂದರ್, ನಿಖಿಲ್ ಪೂಜಾರಿ, ರಾಹುಲ್ ಭೆಕೆ, ಸುಭಾಶಿಶ್ ಬೋಸ್. ಮಿಡ್ ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರೆಂಡನ್ ಫರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಜೀಕ್ಸನ್ ಸಿಂಗ್, ಲಾಲಿಯನ್ಜುವಾಲಾ ಚಾಂಗ್ಟೆ, ಲಿಸ್ಟನ್ ಕೋಲ್ಕೊ, ಮಹೇಶ್ ಸಿಂಗ್ ನೌರೆಮ್, ನಂದಕುಮಾರ್ ಶೇಕರ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಾಮ್.

ಫಾರ್ವರ್ಡ್ಸ್: ಡೇವಿಡ್ ಲಾಲ್ಹನ್ಸಂಗಾ, ಮನ್ವೀರ್ ಸಿಂಗ್, ರಹೀಮ್ ಅಲಿ, ಸುನಿಲ್ ಚೆಟ್ರಿ, ವಿಕ್ರಮ್ ಪ್ರತಾಪ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT