ಶುಕ್ರವಾರ, ಏಪ್ರಿಲ್ 3, 2020
19 °C
ಫುಟ್‌ಬಾಲ್‌ ಆಟಗಾರ್ತಿ ಬಾಲಾದೇವಿ ಅಭಿಮತ

ಭಾರತ ತಂಡದಲ್ಲಿನ ಬದಲಾವಣೆ ಅನುಕೂಲಕರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಂಡದಲ್ಲಿ ಇತ್ತೀಚಿಗೆ ಆಗುತ್ತಿರುವ ಬದಲಾವಣೆಗಳು ಆಟಗಾರರಿಗೆ ಅನುಕೂಲಕರವಾಗಿವೆ ಎಂದು ಭಾರತ ಫುಟ್‌ಬಾಲ್‌ ತಂಡದ ಆಟಗಾರ್ತಿ ಬಾಲಾ ದೇವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಮಹಿಳಾ ತಂಡ ವಿಯೆಟ್ನಾಂ ವಿರುದ್ಧ ನವೆಂಬರ್‌ 3 ಹಾಗೂ 6ರಂದು ನಡೆಯಲಿರುವ ಸೌಹಾರ್ಧ ಪಂದ್ಯಗಳ ಸಿದ್ಧತೆಗಾಗಿ ತರಬೇತಿ ಶಿಬಿರ ಆಯೋಜಿಸಿದೆ.

‘2005ರಲ್ಲಿ ನಾನು ರಾಷ್ಟ್ರೀಯ ಫುಟ್‌ಬಾಲ್‌ ತಂಡಕ್ಕೆ ಕಾಲಿಟ್ಟೆ. ಆಗಿನಿಂದ ಹಲವು ಬದಲಾವಣೆಗಳು ಕಂಡಿದ್ದೇನೆ. ಎಲ್ಲವೂ ಆಟಗಾರ್ತಿಯರಿಗೆ ಸಹಾಯಕವಾಗಿವೆ. ಆಹಾರ ಪದ್ಧತಿ, ತರಬೇತಿ ಅವಧಿಗಳು ಅದರಲ್ಲೂ ಪ್ರಮುಖವಾಗಿ ವಿಡಿಯೊ ವಿಶ್ಲೇಷಣೆಗಳಲ್ಲಿ ಗಣನೀಯ ಬದಲಾವಣೆಗಳು ಆಗಿವೆ’ ಎಂದರು.

‘ಮೊದಲಿಗಿಂತ ಈಗ ಜಿಮ್‌ನಲ್ಲಿ ನಾವು ಹೆಚ್ಚು ಬೆವರು ಹರಿಸುತ್ತಿದ್ದೇವೆ. ಪ್ರಮುಖ ವ್ಯಾಯಾಮಗಳಿಗೆ ಒತ್ತು ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಳು ಗಾಯಗೊಳ್ಳುವಿಕೆಯನ್ನು ಕಡಿಮೆ ಮಾಡಿವೆ ಹಾಗೂ ಬೇಗ ಗುಣಮುಖವಾಗಲು ಅನುಕೂಲಕರವಾಗಿವೆ’ ಎಂದು ತಂಡದ ಪ್ರಮುಖ ಆಟಗಾರ್ತಿಯಾಗಿರುವ ಬಾಲಾ ಅಭಿಪ್ರಾಯಪಟ್ಟರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು