ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕ್ಸಿಂಗ್: ಪ್ರಿಕ್ವಾರ್ಟರ್‌ಫೈನಲ್‌ಗೆ ಆರುಂಧತಿ

ಬಾಕ್ಸಿಂಗ್ ವಿಶ್ವ ಒಲಿಂಪಿಕ್‌ ಕ್ವಾಲಿಫೈಯರ್ಸ್‌: ನರೇಂದರ್ ನಿರ್ಗಮನ
Published 29 ಮೇ 2024, 13:55 IST
Last Updated 29 ಮೇ 2024, 13:55 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಹಾಲಿ ರಾಷ್ಟ್ರೀಯ ಚಾಂಪಿಯನ್ ಆರುಂಧತಿ ಚೌಧರಿ ಎರಡನೇ ಬಾಕ್ಸಿಂಗ್ ವಿಶ್ವ ಒಲಿಂಪಿಕ್‌ ಕ್ವಾಲಿಫೈಯರ್ಸ್‌ನ 66ಕೆ.ಜಿ. ವಿಭಾಗದಲ್ಲಿ ಬುಧವಾರ ಅರ್ಹ ಗೆಲುವಿನೊಡನೆ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನರೇಂದರ್ ಬೆರ್ವಾಲ್‌ (+92 ಕೆ.ಜಿ) ಹೊರಬಿದ್ದರು.

ಚೌಧರಿ 5–0 ಹಿಂದ ಸರ್ವಾನುಮತದ ತೀರ್ಪಿನಲ್ಲಿ ಪೋರ್ಟೊರಿಕೊದ ಸ್ಟಿಫಾನಿ ಪೀನೀರೊ ಅವರನ್ನು ಸೋಲಿಸಿದರು. ಬೆರ್ವಾಲ್‌ 2–3 ರಿಂದ ಇಕ್ವೆಡೋರ್‌ನ ಗೆರ್ಲಾನ್ ಗಿಲ್ಮರ್‌ ಕಾಂಗೊ ಚಲಾ ಅವರಿಗೆ ಮಣಿದರು.

ಮೊದಲ ಸುತ್ತಿನಲ್ಲಿ ಕರಾರುವಾಕ್‌ ಪಂಚ್‌ಗಳೊಡನೆ ಚೌಧರಿ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಅವರು ಅಷ್ಟೊಂದು ಬಿಗಿಪಟ್ಟು ಪ್ರದರ್ಶಿಸಲಿಲ್ಲ. ಆದರೆ ಮೂರನೇ ಸುತ್ತಿನಲ್ಲಿ ತಮ್ಮ ಸ್ಥಿತಿಯನ್ನು ಇನ್ನಷ್ಟು ಉತ್ತಮಪಡಿಸಿ ಸರ್ವಾನುಮತದ ತೀರ್ಪಿನಲ್ಲಿ ಜಯಗಳಿಸಿದರ

ಬೆರ್ವಾಲ್ ಪ್ರಬಲ ಪೈಪೋಟಿ ನೀಡಿದರೂ ಮುಂದಿನ ಸುತ್ತನ್ನು ತಲುಪಲು ಆಗಲಿಲ್ಲ. 32ರ ಸುತ್ತಿನ ಪೈಪೋಟಿಯ ಮೊದಲ ಸುತ್ತಿನಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಆರಂಭಿಸಿದರು. ಎರಡನೇ ಮತ್ತು ಮೂರನೇ ಸುತ್ತಿನಲ್ಲಿ ಅವರ ಹೋರಾಟ ಐವರು ತೀರ್ಪುಗಾರರಲ್ಲಿ ಮೂವರ ಗಮನ ಸೆಳೆಯಿತು. ಆದರೆ ಮುಂದಿನ ಒಟ್ಟಾರೆ ಪಾಯಿಂಟ್ಸ್‌ ಕೊರತೆಯನ್ನು ನೀಗಿಸಲು ಅವರಿಂದ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT