ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅವಿನಾಶ್ ಸಬ್ಳೆ ಅರ್ಹತೆ

Published 16 ಜುಲೈ 2023, 18:14 IST
Last Updated 16 ಜುಲೈ 2023, 18:14 IST
ಅಕ್ಷರ ಗಾತ್ರ

ಸಿಲೆಸಿಯಾ, ಪೋಲೆಂಡ್: ಭಾರತದ ಅಥ್ಲೀಟ್‌ ಅವಿನಾಶ್‌ ಸಬ್ಳೆ ಅವರು 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡರು.

ಭಾನುವಾರ ನಡೆದ ಸಿಲೆಸಿಯಾ ಡೈಮಂಡ್‌ ಲೀಗ್‌ನಲ್ಲಿ ಅವರು ಆರನೇ ಸ್ಥಾನ ಪಡೆದರು. ಸಬ್ಳೆ 8 ನಿ. 11.63 ಸೆ.ಗಳಲ್ಲಿ ಗುರಿ ತಲುಪಿದರು. ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಗೆ ನಿಗದಿಪಡಿಸಿದ್ದ ಸಮಯವನ್ನು (8 ನಿ. 15 ಸೆ.) ಸಾಧಿಸಲು ಅವರು ಯಶಸ್ವಿಯಾದರು.

ಈ ಮೂಲಕ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ 20 ಕಿ.ಮೀ. ನಡಿಗೆ ಸ್ಪರ್ಧಿಗಳಾದ ಆಕಾಶ್‌ದೀಪ್‌ ಸಿಂಗ್, ವಿಕಾಸ್ ಸಿಂಗ್‌, ಪರಂಜೀತ್‌ ಸಿಂಗ್‌, ಪ್ರಿಯಾಂಕಾ ಗೋಸ್ವಾಮಿ ಮತ್ತು ಲಾಂಗ್‌ ಜಂಪರ್‌ ಮುರಳಿ ಶ್ರೀಶಂಕರ್‌ ಅವರ ಪಟ್ಟಿಯನ್ನು ಸೇರಿಕೊಂಡರು.

ಸಬ್ಳೆ ಅವರು ಆಗಸ್ಟ್‌ ತಿಂಗಳಲ್ಲಿ ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT