ಬೆಂಗಳೂರು: ಆರನೇ ವರ್ಷದ ಶ್ರೀರಾಮ್ ಪ್ರಾಪರ್ಟೀಸ್ ಬೆಂಗಳೂರು ಮ್ಯಾರಥಾನ್ ಓಟ ಅಕ್ಟೋಬರ್ 13ರಂದು ನಡೆಯಲಿದ್ದು, ಸುಮಾರು 16,000 ಹವ್ಯಾಸಿ, ವೃತ್ತಿಪರ ಓಟಗಾರರು ಭಾಗವಹಿಸಲಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗುವ ಈ ಸ್ಪರ್ಧೆಯು, ಪ್ಲಾಸ್ಟಿಕ್, ಫ್ಲೆಕ್ಸ್ಗಳ ಬಳಕೆಯಿಲ್ಲದೇ ‘ಸಂಪೂರ್ಣ ಹಸಿರು’ ಆಗಿರುತ್ತದೆ. ಓಟಗಳು ಮೂರು ವಿಭಾಗಗಳಲ್ಲಿ ನಡೆಯಲಿವೆ.

ಮ್ಯಾರಥಾನ್ (42.195 ಕಿ.ಮೀ.), ಹಾಫ್ ಮ್ಯಾರಥಾನ್ (21.1 ಕಿ.ಮೀ.) ಮತ್ತು 5 ಕಿ.ಮೀ. ಹೋಪ್ ರನ್ ಇರುತ್ತದೆ ಎಂದು ಶ್ರೀರಾಮ್ ಪ್ರಾಪರ್ಟೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುರಳಿ ಎಂ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎನ್ಇಬಿ ಸ್ಪೋರ್ಟ್ಸ್ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ನಾಗರಾಜ ಅಡಿಗ ಮಾತನಾಡಿ, ‘ಆರೋಗ್ಯಕರ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ಮಾಡಲು ಇಂಥ ಓಟಗಳು ಸಹಕಾರಿ. ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್ಸ್ ಸಂಸ್ಥೆ ಈ ಓಟವನ್ನು ಪ್ರಮಾಣೀಕರಿಸಿದೆ. ವರ್ಷದಿಂದ ವರ್ಷಕ್ಕೆ ಪ್ರವೇಶಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೇಸ್ ಡೇ ಟೀ ಶರ್ಟ್, ಪದಕಗಳನ್ನು ಬಿಡುಗಡೆ ಮಾಡಲಾಯಿತು.

ಓಟದ ಪ್ರಚಾರ ರಾಯಭಾರಿಗಳಾದ ಮಾಜಿ ಅಂತರರಾಷ್ಟ್ರೀಯ ಈಜುಗಾರ್ತಿ ನಿಶಾ ಮಿಲೆಟ್, ಹಿರಿಯ ಅಥ್ಲೀಟ್ಗಳಾದ ರೀತ್ ಅಬ್ರಹಾಂ, ಪ್ರಮೀಳಾ ಅಯ್ಯಪ್ಪ, ಅಂಗವಿಕಲ ಕ್ರೀಡಾಪಟು ಮಾಲತಿ ಹೊಳ್ಳ ಅವರೂ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.