ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೇಶ್ ಫೋಗಟ್ ವಿರುದ್ಧ ತೀರ್ಪು ಬಿಚ್ಚಿಟ್ಟ ಸಿಎಎಸ್

Published : 20 ಆಗಸ್ಟ್ 2024, 0:46 IST
Last Updated : 20 ಆಗಸ್ಟ್ 2024, 0:46 IST
ಫಾಲೋ ಮಾಡಿ
Comments

ನವದೆಹಲಿ: ಕುಸ್ತಿಯಲ್ಲಿ ದೇಹತೂಕ ನಿರ್ವಹಣೆಯ ನಿಯಮಗಳು ಸ್ಪಷ್ಟವಾಗಿವೆ. ಅವು ಎಲ್ಲ ಸ್ಪರ್ಧಿಗಳಿಗೂ ಒಂದೇ ಆಗಿವೆ. ನಿಗದಿತ ತೂಕಕ್ಕಿಂತ ಹೆಚ್ಚಿದ್ದರೆ ಅದು ನಿಯಮದ ಉಲ್ಲಂಘನೆಯಾಗುತ್ತದೆ. ಮಹಿಳಾ ಕುಸ್ತಿಪಟುಗಳು ತೂಕಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಧರಿಸುವ ಸಿಂಗ್ಲೆಟ್‌ ತೂಕವನ್ನೂ ಪರಿಗಣಿಸುವುದಿಲ್ಲ. ಆದ್ದರಿಂದ ತಮ್ಮ ನಿಗದಿತ ತೂಕದ ವ್ಯಾಪ್ತಿಯೊಳಗೆ ಇರಬೇಕಾಗಿರುವುದು ಕ್ರೀಡಾಪಟುಗಳ ಹೊಣೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್‌) ಸ್ಪಷ್ಟಪಡಿಸಿದೆ. 

ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ 100 ಗ್ರಾಮ್ ಹೆಚ್ಚು ದೇಹತೂಕವಿದ್ದ ಕಾರಣಕ್ಕೆ ವಿನೇಶ್ ಫೋಗಟ್ ಫೈನಲ್‌ ಬೌಟ್‌ನಿಂದ ಅನರ್ಹಗೊಂಡಿದ್ದರು. ಅವರು ಫೈನಲ್‌ ತಲುಪಿದ ಕಾರಣಕ್ಕಾಗಿ ಬೆಳ್ಳಿ ಪದಕ ನೀಡಬೇಕು ಎಂದು ಸಿಎಎಸ್‌ ನಲ್ಲಿ ಮೇಲ್ಮನವಿ  ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಮಂಡಳಿಯು ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಇದರಿಂದಾಗಿ ವಿನೇಶ್ ಖಾಲಿ ಕೈಯಲ್ಲಿ ಸ್ವದೇಶಕ್ಕೆ ಮರಳಿದರು. 

ವಿನೇಶ್ ಪ್ರಕರಣದ ತೀರ್ಪಿನ ವರದಿಯನ್ನು ಸಿಎಎಸ್‌ ಸೋಮವಾರ ಪ್ರಕಟಿಸಿದೆ. 

‘ಅವರ (ವಿನೇಶ್) ದೇಹತೂಕದಲ್ಲಿ 100 ಗ್ರಾಂ ಹೆಚ್ಚು ಇರುವುದರ ಸಾಕ್ಷ್ಯಾಧಾರಗಳು ಇದ್ದವು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅವುಗಳನ್ನೂ ಪರಿಶೀಲಿಸಲಾಗಿದೆ.  ಅವರ ಪ್ರಕರಣದಲ್ಲಿ ದಾಖಲಾಗಿರುವ 100 ಗ್ರಾಂ ಸಣ್ಣ ಪ್ರಮಾಣವೆನಿಸಿದರೂ ನಿಗದಿಗಿಂತ ಹೆಚ್ಚುವರಿಯಾಗಿದೆ. ನೀರಿನ ಸೇವನೆ ಮತ್ತು ನೀರಿನ ಧಾರಣದ ಕಾರಣಗಳಿರಬಹುದು. ಅದರಲ್ಲೂ  ಋತುಚಕ್ರದ ಪೂರ್ವದ ಹಂತದಲ್ಲಿ ಆಗಿರಬಹುದು’ ಎಂದು ಸಿಎಎಸ್‌ ಉಲ್ಲೇಖಿಸಿದೆ.

ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸನೈಲಿಸ್ ಗುಜ್ಮನ್  ಲೋಪೆಜ್ ವಿರುದ್ಧ ಜಯಿಸಿದ್ದರು. 

ಸಹೋದರನಿಗೆ ರಾಖಿ ಕಟ್ಟಿದ ವಿನೇಶ್

ಶನಿವಾರ ತವರೂರು ಬಲಾಲಿಗೆ ಮರಳಿದ್ದಾರೆ. ಭಾನುವಾರವೂ ಅವರಿಗೆ ಊರಿನಲ್ಲಿ ಸನ್ಮಾನ ಸಮಾರಂಭಗಳು ಏರ್ಪಟ್ಟಿದ್ದವು. ಸೋಮವಾರ ಒಂದಿಷ್ಟು ನಿರಾಳವಾಗಿದ್ದ ಅವರು ರಕ್ಷಾ ಬಂಧನದ ಅಂಗವಾಗಿ ತಮ್ಮ ಸಹೋದರ ಹರವಿಂದರ್‌ ಸಿಂಗ್ ಅವರಿಗೆ ರಾಖಿ ಕಟ್ಟಿದರು.  ‘ಹೋದ ವರ್ಷ ₹ 500 ಕೊಟ್ಟಿದ್ದ ಹರವಿಂದರ್ ಈ ಸಲ ಬರೀ ಹತ್ತು ರೂಪಾಯಿ ಕೊಟ್ಟಿದ್ದಾನೆ‘ ಎಂದು  ವಿನೇಶ್ ತಮ್ಮ ಸಹೋದರನೊಂದಿಗೆ ಲಘು ಹಾಸ್ಯ ಮಾಡುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಇದೆ. ಅದನ್ನು ಹರವಿಂದರ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿನೇಶ್ ಅವರ ಕೈಗಳಲ್ಲಿ ₹ 500ರ ನೋಟುಗಳ ಬಂಡಲ್ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT