ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್‌ ಸಮಾರೋಪ ಸಮಾರಂಭ: ಹರ್ವಿಂದರ್, ಪ್ರೀತಿ ಭಾರತದ ಧ್ವಜಧಾರಿಗಳು

Published : 6 ಸೆಪ್ಟೆಂಬರ್ 2024, 13:45 IST
Last Updated : 6 ಸೆಪ್ಟೆಂಬರ್ 2024, 13:45 IST
ಫಾಲೋ ಮಾಡಿ
Comments

ಪ್ಯಾರಿಸ್‌: ಆರ್ಚರಿಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಹರ್ವಿಂದರ್ ಸಿಂಗ್ ಮತ್ತು ಸ್ಪ್ರಿಂಟರ್‌ ಪ್ರೀತಿ ಪಾಲ್ ಅವರು ಭಾನುವಾರ ನಡೆಯುವ ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿದ್ದಾರೆ.

ಪ್ಯಾರಾಲಿಂಪಿಕ್ಸ್‌ಗಳಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಸ್ಪರ್ಧಿ ಎಂಬ ಹಿರಿಮೆ ಉತ್ತರಪ್ರದೇಶದ ಪ್ರೀತಿ ಅವರದು.

2021ರ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದ ಹರ್ವಿಂದರ್ ಈ ಬಾರಿಯ ಕ್ರೀಡೆಗಳಲ್ಲಿ ಚಿನ್ನದ ಪದಕಕ್ಕೆ ಯಶಸ್ವಿಯಾಗಿ ಗುರಿಯಿಟ್ಟು ಚಾರಿತ್ರಿಕ ಸಾಧನೆಗೆ ಪಾತ್ರರಾಗಿದ್ದರು. ‘ಸಮಾರೋಪ ಸಮಾರಂಭದಲ್ಲಿ ನನಗೆ ಧ್ವಜಧಾರಿಯಾಗುವ ಅವಕಾಶ ದೊಡ್ಡಗೌರವವಾಗಿದ್ದು, ಇದನ್ನು ಕನಸಿನ ಮನಸ್ಸಿನಲ್ಲೂ ಯೋಚಿಸಿರಲಿಲ್ಲ’ ಎಂದು 33 ವರ್ಷ ವಯಸ್ಸಿನ ಬಿಲ್ಗಾರ ಹೇಳಿದರು.

‘ನನ್ನ ಮೇಲೆ ನಂಬಿಕೆಯಿಟ್ಟ ಎಲ್ಲರಿಗೂ ಈ ಗೆಲುವನ್ನು ಸಮರ್ಪಿಸುವೆ. ಹಲವರು ತಮ್ಮ ಕನಸನ್ನು ನನಸುಗೊಳಿಸಲು ನನ್ನ ಸಾಧನೆ ಪ್ರೇರಣೆಯಾಗಬಹುದಂಬ ವಿಶ್ವಾಸವಿದೆ’ ಎಂದು ಹೇಳಿದರು.

23 ವರ್ಷ ವಯಸ್ಸಿನ ಪ್ರೀತಿ, ಮಹಿಳೆಯರ ಟಿ25 ವಿಭಾಗದ 100 ಮತ್ತು 200 ಮೀ. ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಅದೂ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಡನೆ. ಕ್ರಮವಾಗಿ 14.21 ಸೆ. ಮತ್ತು 30.1 ಸೆ. ಅವಧಿಯಲ್ಲಿ.

‘ಭಾರತದ ಧ್ವಜಧಾರಿಯಾಗಿ ಪ್ರತಿನಿಧಿಸುತ್ತಿರುವುದು ನನಗೊಲಿದ ಅತಿ ದೊಡ್ಡ ಗೌರವ. ಇದು ನನಗೆ ಮಾತ್ರ ದೊಡ್ಡ ಸಂದರ್ಭವಲ್ಲ. ದೇಶಕ್ಕೆ ಹೆಮ್ಮೆ ಮೂಡಿಸಲು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ನಡೆಸಿದ ಪ್ಯಾರಾ ಅಥ್ಲೀಟುಗಳಿಗೆ ಸಲ್ಲುವ ಗೌರವ’ ಎಂದು ಪ್ರೀತಿ ಪ್ರತಿಕ್ರಿಯಿಸಿದ್ದಾರೆ.

ಪ್ರೀತಿ ಅವರಿಗೆ ಸ್ನಾಯು ಸಮಸ್ಯೆ, ವೇಗವಾಗಿ ಕೈ, ಕತ್ತು ತಿರುಗಿಸಲು ಆಗದ ತೊಂದರೆಯಿದೆ.

ಭಾರತದ ಅಥ್ಲೀಟುಗಳು ಆರು ಚಿನ್ನ ಸೇರಿ ಇದುವರೆಗೆ 26 ಪದಕಗಳನ್ನು ಬಾಚಿಕೊಂಡಿದ್ದಾರೆ. ಇದರಲ್ಲಿ 9 ಬೆಳ್ಳಿ ಪದಕಗಳೂ ಇವೆ.

ಪ್ರೀತಿ ಪಾಲ್‌
ಪ್ರೀತಿ ಪಾಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT