ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ಜೂನ್ 16 ರಿಂದ 63 ದಿನಗಳ ಕಾಲ ನಡೆಯಲಿರುವ ಜೂನಿಯರ್ ಪುರುಷರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ 40 ಆಟಗಾರರ ಸಂಭವನೀಯ ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ.

ಭಾರತ ಜೂನಿಯರ್ ಪುರುಷರ ತಂಡದ ಯುರೋಪ್ ಪ್ರವಾಸದ ಬೆನ್ನಲ್ಲೆಈ ಶಿಬಿರ ನಡೆಯುತ್ತಿದೆ. ಅಲ್ಲಿ ತಂಡವು ಮೇ 20-29 ರವರೆಗೆ ಬೆಲ್ಜಿಯಂ, ಜರ್ಮನಿ ಮತ್ತು ನೆದರ್ಲೆಂಡ್ ಕ್ಲಬ್ ತಂಡ ಬ್ರೆಡೇಸ್ ಹಾಕಿ ವೆರೆನಿಜಿಂಗ್ ಪುಷ್ ವಿರುದ್ಧ ಐದು ಪಂದ್ಯಗಳನ್ನು ಆಡಿತು.

ಕೋಚ್ ಜನಾರ್ದನ ಸಿ.ಬಿ ನೇತೃತ್ವದ ಮತ್ತು ಹೈಪರ್ಫಾಮೆನ್ಸ್ ನಿರ್ದೇಶಕ ಹರ್ಮನ್ ಕ್ರೂಸ್ ಅವರ ಮೇಲ್ವಿಚಾರಣೆಯಲ್ಲಿ ಶಿಬಿರವು ಆಗಸ್ಟ್ 18 ರಂದು ಕೊನೆಗೊಳ್ಳಲಿದೆ.

ಜನಾರ್ಧನ ಮಾತನಾಡಿ, ‘ನಮ್ಮಲ್ಲಿ ಪ್ರತಿಭಾವಂತ ಆಟಗಾರರ ತಂಡ ಇದೆ. ತರಬೇತಿ ಶಿಬಿರಗಳು ಅವರ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುತ್ತದೆ. ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿರುವ ಒಗ್ಗಟ್ಟಿನ ಮತ್ತು ಅಸಾಧಾರಣ ತಂಡವನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.