ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಪಾಲಚಂಡ ತಂಡಕ್ಕೆ ಗೆಲುವು

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ: ಆತಿಥೇಯ ತಂಡಕ್ಕೆ ಗೆಲುವು
Published 4 ಏಪ್ರಿಲ್ 2024, 4:23 IST
Last Updated 4 ಏಪ್ರಿಲ್ 2024, 4:23 IST
ಅಕ್ಷರ ಗಾತ್ರ

ನಾಪೋಕ್ಲು: ಸಾಂಘಿಕ ಆಟ ಪ್ರದರ್ಶಿಸಿದ ಪಾಲಚಂಡ ತಂಡವು ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ 6–0ಯಿಂದ ಬಿಜ್ಜಂಡ ತಂಡದ ವಿರುದ್ಧ ಸುಲಭ ಜಯ ಗಳಿಸಿತು.

ಬುಧವಾರದ ಪಂದ್ಯದಲ್ಲಿ ಪಾಲಚಂಡ ತಂಡದ ಪರ ಪ್ರಾರ್ಥನ್ ಪೊನ್ನಣ್ಣ ಮತ್ತು ಚೇತನ್ ಬೋಪಣ್ಣ ತಲಾ 2 ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಆತಿಥೇಯ ಕುಂಡ್ಯೋಳಂಡ ತಂಡ 3–2ರ ಅಂತರದಿಂದ ಪುಚ್ಚಿಮಾಡ ವಿರುದ್ಧ ಗೆಲುವು ಸಾಧಿಸಿ, ಮುಂದಿನ ಸುತ್ತು ಪ್ರವೇಶಿಸಿತು.

ಪಂದ್ಯದ ಫಲಿತಾಂಶ: ನಂಬುಬುಡಮಂಡ 3–1ರಿಂದ ಪೊನ್ನಾಲತಂಡ ವಿರುದ್ಧ; ವಾಟೇರಿರ 3–0ಯಿಂದ ನಡಿಕೇರಿಯಂಡ ವಿರುದ್ಧ; ಪಾಲೆಯಡ 3-0ಯಿಂದ ತಂಬಂಡ ವಿರುದ್ಧ; ಕಲ್ಲೆಂಗಡ 3–0ಯಿಂದ ಪಳಂಗೇಟಿರ ವಿರುದ್ಧ; ಚೊಟ್ಟೇರ 2–1ರಿಂದ ಕಾಯಪಂಡ ವಿರುದ್ಧ; ಬಾಚಮಂಡ 3–0 ಯಿಂದ ಕೊಕ್ಕಲಮಾಡ ವಿರುದ್ಧ; ಚೆರುವಾಳಂಡ 2–1ರಿಂದ ಬಲ್ಲಿಯಂಡ ವಿರುದ್ಧ; ಮುದ್ದಿಯಂಡ 5–2ರಿಂದ ಬೊಜ್ಜಂಗಡ ವಿರುದ್ಧ; ಮೊಣ್ಣಂಡ 3–0ಯಿಂದ ಆಪಟ್ಟಿರ ವಿರುದ್ಧ ಗೆಲುವು ಸಾಧಿಸಿದವು.

ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ  ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ಚೊಟ್ಟೇರ ತಂಡ ಮತ್ತು ಕಾಯಪಂಡ ತಂಡದ ಆಟಗಾರರು ಗೆಲುವಿಗಾಗಿ ಸೆಣಸಾಡಿದರು
ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ  ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ಚೊಟ್ಟೇರ ತಂಡ ಮತ್ತು ಕಾಯಪಂಡ ತಂಡದ ಆಟಗಾರರು ಗೆಲುವಿಗಾಗಿ ಸೆಣಸಾಡಿದರು

ಕೇಕಡ ಮತ್ತು ಕೂಪದಿರ ತಂಡಗಳ ಪಂದ್ಯ ಸಮಬಲಗೊಂಡು, ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಕೂಪದಿರ 3-1ರಿಂದ ಗೆಲುವು ಸಾಧಿಸಿತು. ಅಮ್ಮನಕುಟ್ಟಂಡ ವಿರುದ್ಧ ಬೊಟ್ಟೋಳಂಡ, ಕಿರಿಯಮಾಡ ವಿರುದ್ಧ ಬೈರಟಿರ, ನೆಲ್ಲಿರ ವಿರುದ್ಧ ಕುಪ್ಪಣಮಾಡ, ಜಂಬಂಡ ವಿರುದ್ಧ ಚೊಟ್ಟೆಕ್‌ಮಾಡ, ಬೋಳ್ತಂಡ ತಂಡದ ವಿರುದ್ಧ ಅದೇಂಗಡ ವಾಕ್‌ಓವರ್‌ನಲ್ಲಿ ಮುಂದಿನ ಸುತ್ತು ಪ್ರವೇಶಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT