ಬೆಂಗಳೂರು: ರೇಸ್ ಪ್ರಿಯರು ಕಾತುರದಿಂದ ಕಾಯುತ್ತಿರುವ ಬೆಂಗಳೂರು ಬೇಸಿಗೆ ರೇಸ್‌ಗಳ ಪ್ರತಿಷ್ಠಿತ ಹೆಚ್‌ಪಿಎಸ್‌ಎಲ್ ಬೆಂಗಳೂರು ಬೇಸಿಗೆ ಡರ್ಬಿ ಭಾನುವಾರ ಸಂಜೆ 4:05ಕ್ಕೆ ನಡೆಯಲಿದೆ.
ಹೆಚ್‌ಪಿಎಸ್‌ಎಲ್ ಸಂಸ್ಥೆಯ ಪ್ರಾಯೋಜಕತ್ವ ಜೊತೆಗೆ ಬೆಂಗಳೂರು ಟರ್ಫ್ ಕ್ಲಬ್ ಜಂಟಿಯಾಗಿ ಏರ್ಪಡಿಸಿರುವ ಡರ್ಬಿಯ ಒಟ್ಟು ಬಹುಮಾನದ ಮೊತ್ತ ಸುಮಾರು₹ 2 ಕೋಟಿ. ಇದರಲ್ಲಿ ಗೆಲ್ಲುವ ಕುದುರೆಯು ಮೊದಲನೇ ಬಹುಮಾನವಾಗಿ ಸುಮಾರು ₹ 99 ಲಕ್ಷ ಪಡೆಯಲಿದೆ.
ಸ್ವಲ್ಪ ಮುಕ್ತವಾಗಿ ಕಂಡು ಬರುತ್ತಿರುವ ಡರ್ಬಿಯ ಕಣದಲ್ಲಿ ಹನ್ನೆರಡು ಕುದುರೆಗಳು ಸ್ಫರ್ಧಿ ಸುತ್ತಿವೆ; ಇವುಗಳಲ್ಲಿ,ಹತ್ತು ಗಂಡು ಮತ್ತು ಎರಡು ಹೆಣ್ಣು. ಸುಲೈಮಾನ್ ಅತೋಲಾಹಿ ತರಬೇತಿಯಲ್ಲಿರುವ ಪೊಸಿಟಾನೊ, ಪೆಸಿ ಶ್ರಾಫ್ ತರಬೇತಿ ನೀಡಿರುವ ಸ್ಯಾಂಟಿಸಿಮೊ ಮತ್ತು ದಿ ಪ್ಯಾಂಥರ್ ಹಾಗೂ ರಾಜೇಶ್ ನರೇಡು ತರಬೇತಿಯಲ್ಲಿ ಪಳಗಿರುವ ಎಕ್ಸಲೆಂಟ್ ಲಾಸ್ ಪ್ರಮುಖ ಸ್ಫರ್ಧಿಗಳು. ಇವುಗಳಲ್ಲಿ, ಸ್ಯಾಂಟಿಸಿಮೊ ಮತ್ತೊ ಎಕ್ಸಲೆಂಟ್ ಲಾಸ್ ನಡುವೆ ನೇರ ಪೈಪೋಟಿ ಕಂಡು ಬರುತ್ತಿದೆ.
ಫಿಲ್ಲೀಸ್ ಚಾಂಪಿಯನ್‌ಷಿಪ್ ಸ್ಟೇಕ್ಸ್‌ನಲ್ಲಿ ಎಕ್ಸಲೆಂಟ್ ಲಾಸ್ ಮತ್ತೆ ತನ್ನ ಗೆಲುವಿನ ಲಯ ಕಂಡುಕೊಂಡಿದೆ.ಸ್ಯಾಂಟಿಸಿಮೊ ಸತತವಾಗಿ ನಾಲ್ಕು ಬಾರಿ ಗೆದ್ದು, ಕೋಲ್ಟ್ಸ್‌ಚಾಂಪಿಯನ್‌ಷಿಪ್ ಸ್ಟೇಕ್ಸ್‌ನಲ್ಲಿ ನೇರ ಅಂತರದಲ್ಲಿ ಆಫ್ರಿಕನ್ ಗೋಲ್ಡ್ ಕುದುರೆಗೆ ಸೋತಿದೆ. ಸಮಬಲದ ಇವರೆಡರಲ್ಲಿ, ನಿರಾಯಾಸವಾಗಿ ಗೆದ್ದಿರುವ ಎಕ್ಸಲೆಂಟ್ ಲಾಸ್ ತುಸು ಮುಂಚೂಣಿಯಲ್ಲಿರುವಂತೆ ಕಂಡಿದ್ದು, ಸ್ಯಾಂಟಿಸಿಮೊ ಕುದುರೆಯಿಂದ ಈ ಡರ್ಬಿ ಗೆಲ್ಲುವ ಹೆಚ್ಚಿನ ಅವಕಾಶ ಹೊಂದಿದೆ ಎಂದು ನಿರೀಕ್ಷಿಸ ಲಾಗಿದೆ. ಉಳಿದ ಸ್ಥಾನಗಳಿಗೆ ದಿ ಪ್ಯಾಂಥರ್ ಮತ್ತು ಪೊಸಿಟಾನೊ ನಡುವೆ ಪೈಪೋಟಿಯಿದೆ.