ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ: ಸವಾಲು ಮುನ್ನಡೆಸಲಿರುವ ಹಂಪಿ, ಹರಿಕಾ, ವೈಶಾಲಿ

2024–25 ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ
Published 28 ಏಪ್ರಿಲ್ 2024, 11:25 IST
Last Updated 28 ಏಪ್ರಿಲ್ 2024, 11:25 IST
ಅಕ್ಷರ ಗಾತ್ರ

ನವದೆಹಲಿ: ಗ್ರ್ಯಾಂಡ್ ಮಾಸ್ಟರ್‌ಗಳಾದ ಕೊನೇರು ಹಂಪಿ, ಹರಿಕಾ ದ್ರೋಣವಳ್ಳಿ ಮತ್ತು ಆರ್. ವೈಶಾಲಿ ಅವರು 2024-2025ರ ಫಿಡೆ ಮಹಿಳಾ ಗ್ರ್ಯಾನ್‌ಪ್ರೀ ಸರಣಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಅರ್ಹತಾ ನಿಯಮಗಳನ್ನು ಪೂರೈಸಿದ ಬಳಿಕ ಎಲ್ಲಾ 14 ಆಟಗಾರ್ತಿಯರು ಮಹಿಳಾ  ಗ್ರ್ಯಾನ್‌ಪ್ರೀನಲ್ಲಿ ತಮ್ಮ ಸ್ಥಾನ ಗಳಿಸಿದ್ದಾರೆ. ಉಳಿದ ಆರು ಆಟಗಾರರನ್ನು ಪ್ರತಿ ಆರು ಟೂರ್ನಿಗಳ ಸಂಘಟಕರು ನಾಮನಿರ್ದೇಶನ ಮಾಡುತ್ತಾರೆ.

ತಾನ್ ಝೊಂಗ್ಯಿ (2017-2018), ಅಲೆಕ್ಸಾಂಡ್ರಾ ಕೊಸ್ಟೆನಿಕ್ (2008-2010) ಮತ್ತು ಮರಿಯಾ ಮುಜಿಚುಕ್ (2015-2016)   ಎಂಬ ಮೂವರು ಮಹಿಳಾ ವಿಶ್ವ ಚಾಂಪಿಯನ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರೊಂದಿಗೆ ಮಾಜಿ ರ್‍ಯಾಪಿಡ್‌ ವಿಶ್ವ ಚಾಂಪಿಯನ್ ಹಂಪಿ, ಕ್ಯಾಟರಿನಾ ಲಗ್ನೊ ಮತ್ತು ಅನ್ನಾ ಮುಜಿಚುಕ್ ಸೇರಿದ್ದಾರೆ.

ಹಾಲಿ ಚಾಂಪಿಯನ್ ಜು ವೆಂಜುನ್ ಈ ಸರಣಿಯಲ್ಲಿ ಭಾಗವಹಿಸುತ್ತಿಲ್ಲ. ಅವರ ಬದಲಿಗೆ ಮಹಿಳಾ ವಿಶ್ವ ರ್‍ಯಾಪಿಡ್ ಮತ್ತು ಮಹಿಳಾ ವಿಶ್ವ ಬ್ಲಿಟ್ಜ್ ಚಾಂಪಿಯನ್‌ಷಿಪ್‌ 2018ರ ರನ್ನರ್‌ ಅಪ್ ಸರಸಾದತ್ ಖಡೆಮಲ್‌ಶರೀಹ್ ಅವರನ್ನು ಆಯ್ಕೆ ಮಾಡಲಾಗಿದೆ.   

2023ರ ಅಕ್ಟೋಬರ್‌ನಲ್ಲಿ ಫಿಡೆ ಮಹಿಳಾ ಗ್ರ್ಯಾಂಡ್ ಮಾಸ್ಟರ್ಸ್‌ (ಡಬ್ಲ್ಯುಜಿಪಿ) ನಿಯಮಗಳ ಕೂಲಂಕಷ ಪರಿಶೀಲನೆಯನ್ನು ಘೋಷಿಸಿತು. ಹಿಂದಿನ ಸರಣಿಗೆ ಹೋಲಿಸಿದರೆ, ಮುಂಬರುವ ಡಬ್ಲ್ಯುಜಿಪಿ ಸರಣಿಯು ಹಲವಾರು ಸುಧಾರಣೆಗಳನ್ನು ಹೊಂದಿದೆ.

ಟೂರ್ನಿಗಳ  ಸಂಖ್ಯೆಯು ನಾಲ್ಕರಿಂದ ಆರಕ್ಕೆ ಏರಿದೆ ಮತ್ತು ಭಾಗವಹಿಸುವವರ ಸಂಖ್ಯೆಯೂ 16 ರಿಂದ 20ಕ್ಕೇರಿದೆ. ಇದಲ್ಲದೆ,  ಬಹುಮಾನದ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ.

ಫಿಡೆ ಸಿಇಒ ಎಮಿಲ್ ಸುಟೊವ್ಸ್ಕಿ, ಸ್ಪರ್ಧೆಗೆ ಅರ್ಹತೆ ಪಡೆದ ಆಟಗಾರರನ್ನು ಅಭಿನಂದಿಸಿದರು ಮತ್ತು ಮಹಿಳಾ ಚೆಸ್‌ಗೆ ಡಬ್ಲ್ಯುಜಿಪಿಯ ಮಹತ್ವವನ್ನು ತಿಳಿಸಿದರು.  

‘ಫಿಡೆಯ ಪ್ರಮುಖ ಗಮನದ ಕ್ಷೇತ್ರವೆಂದರೆ ಮಹಿಳಾ ಚೆಸ್. ಹೆಚ್ಚಿನ ಮಹಿಳೆಯರು ಆಡಬೇಕೆಂದು ಬಯಸುತ್ತೇವೆ ಮತ್ತು ಅವರು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬುದನ್ನು ಬಯಸುತ್ತೇವೆ. ನಮ್ಮ ಮಹಿಳಾ ಆಟಗಾರ್ತಿಯರು ಇದಕ್ಕೆ ಅರ್ಹರು  ಮತ್ತು ಇದು ಹೊಸ ಪೀಳಿಗೆಗೆ ಪ್ರೋತ್ಸಾಹಕವಾಗಿಯೂ ಕಾರ್ಯನಿರ್ವಹಿಸುತ್ತದೆ’ ಎಂದು ಸುಟೊವ್ಸ್ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟೊರೆಂಟೊದಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಹಂಪಿ ಎರಡನೇ ಸ್ಥಾನ ಗಳಿಸಿದರೆ, ವೈಶಾಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಆರ್. ವೈಶಾಲಿ
ಆರ್. ವೈಶಾಲಿ
ಹರಿಕಾ ದ್ರೋಣವಳ್ಳಿ
ಹರಿಕಾ ದ್ರೋಣವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT